ನ್ಯೂಸ್

Naga Chaitanya ಜತೆ ನಿಶ್ಚಿತಾರ್ಥಕ್ಕೂ ಮುನ್ನ ಫ್ಯಾಷನ್ ಡಿಸೈನರ್ ಪ್ರೀತಿಯಲ್ಲಿ ಬಿದ್ದಿದ್ದರಾ ಶೋಭಿತಾ ಧೂಳಿಪಾಲ?

ಹೈದ್ರಾಬಾದ್​​: ನಟಿ ಸೋಭಿತಾ ಧೂಳಿಪಾಲ ಅವರು ನಟ ನಾಗ ಚೈತನ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿ   2024  ಡಿಸೆಂಬರ್ 4ರಂದು ಮದುವೆ ಕೂಡಾ ನಡೆಯಲಿದೆ. ಈ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದೆ.

ನಾಗ ಚೈತನ್ಯ ಅವರನ್ನು ಭೇಟಿಯಾಗುವ ಮುನ್ನ ಶೋಭಿತಾ ಖ್ಯಾತ ಫ್ಯಾಷನ್ ಡಿಸೈನರ್ ಪ್ರಣವ್ ಮಿಶ್ರಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಅವರು ಹ್ಯೂಮನ್ ಬ್ರಾಂಡ್‌ನ ಸಹ-ಸಂಸ್ಥಾಪಕರೂ ಹೌದು. ಸದ್ಯ ಪ್ರಣವ್ ಆ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 2019 ರಲ್ಲಿ ಫ್ಯಾಷನ್ ಈವೆಂಟ್‌ನಲ್ಲಿ ಭೇಟಿಯಾದರು, ಪ್ರವಾಸಕ್ಕೂ ಕೂಡಾ  ಹೋಗಿದ್ದರು ಮತ್ತು ಆಗಾಗ್ಗೆ ಪರಸ್ಪರರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡುತ್ತಿದ್ದರು. ಅವರ ಪ್ರೇಮ ಸಂಬಂಧವು ಅಲ್ಪಕಾಲಿಕವಾಗಿತ್ತು ಮತ್ತು ಕೆಲವು ಕಾರಣಗಳಿಂದ  ಈ ಜೋಡಿ ಬೇರ್ಪಟ್ಟರು.

ನಾಗ ಚೈತನ್ಯ ತನ್ನ ಮೊದಲ ಪತ್ನಿ ಸಮಂತಾ ಅವರಿಂದ ಬೇರ್ಪಟ್ಟ ನಂತರ, ಅವರು ಮತ್ತು ಸೋಭಿತಾ, ನಾಗ ಚೈತನ್ಯ ಬಗ್ಗೆ ಊಹಾಪೋಹಗಳು ಹಬ್ಬಿದ್ದವು.  ಮಾರ್ಚ್ 2023 ರಲ್ಲಿ, ಇಬ್ಬರೂ ಲಂಡನ್ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ಇದು ಅವರ ಪ್ರಣಯದ ವದಂತಿಗಳನ್ನು ಹುಟ್ಟುಹಾಕಿತು. ಚೈತನ್ಯ ಮತ್ತು ಶೋಭಿತಾ ಪ್ರೀತಿಸುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು.

ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ. ಆಮಂತ್ರಣಗಳನ್ನು ಈಗಾಗಲೇ ಕಳುಹಿಸಲಾಗಿದೆ. ನಾಗ ಚೈತನ್ಯ ಮತ್ತು ಸೋಭಿತಾ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಯ್ಕೆಯಾದ ಶುಭ ಮುಹೂರ್ತದ ಪ್ರಕಾರ ಡಿಸೆಂಬರ್ 4 ರಂದು ರಾತ್ರಿ 8:13 ಕ್ಕೆ ಚೈತನ್ಯ ಅವರು ಸೋಭಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.