ನ್ಯೂಸ್

ರೈಲಿಗೆ ಎಂಟ್ರಿ ಕೊಟ್ಟ ನಾಗರಾಜ; ಭಯಭೀತರಾದ ಪ್ರಯಾಣಿಕರಿಂದ ರಕ್ಷಣಾ ತಂಡಕ್ಕೆ ಕರೆ

ಉತ್ತರಪ್ರದೇಶ: ಸಾನಾನ್ಯವಾಗಿ ಹಾವನ್ನ ನೋಡಿದ ತಕ್ಷಣ ಭಯಭೀತರಾಗೋದು ಸಾಮಾನ್ಯ. ಮನೆಯ ಗಾರ್ಡನ್​​, ಪೊದೆ, ಕಾಡು ಹೆಚ್ಚು ಅಂದ್ರೆ ಮನೆಯೊಳಗೂ ಹಾವು ಕಾಣಿಸಿಕೊಳ್ಳುವ ಸಾಕಷ್ಟು ಪ್ರಕರಣಗಳಿವೆ. ಇದೀಗ ಹಾವೊಂದು ರೈಲಿಗೆ ಎಂಟ್ರಿ ಕೊಟ್ಟಿದೆ.


ರೈಲಿನಲ್ಲಿ ಹಾವೊಂದು ಪ್ರತ್ಯಕ್ಷವಾಗಿದ್ದು, ಪ್ರಯಾಣಿಕ ಆತಂಕಕ್ಕೆ ಒಳಗಾಗಿದ್ದಾರೆ. ಉತ್ತರಪ್ರದೇಶದ ರೈಲಿನ ಎಸಿ ಬೋಗಿಯೊಂದರಲ್ಲಿ ನಾಗರಾಜ ಪ್ರತ್ಯಕ್ಷವಾಗಿದ್ದು, ಪ್ರಯಾಣಿಕರು ಒಂದು ಕ್ಷಣ ಗಾಬರಿಯಾಗಿದ್ದರು.


ರೈಲಿನೊಳಗೆ ಎಂಟ್ರಿ ಕೊಟ್ಟ ನಾಗರಾಜ ಅದೃಷ್ಟವಶಾತ್​ ಯಾರಿಗೂ ಯಾವುದೇ ತೊಂದರೆ ಮಾಡಿಲ್ಲ.


ಅರಣ್ಯ ಇಲಾಖೆಯ ತಂಡಕ್ಕೆ ಪ್ರಯಾಣಿಕರು ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುವವರೆಗೂ ಪ್ರಯಾಣಿಕರು ರೈಲ್ವೆ ಸ್ಟೇಶನ್​ನಲ್ಲೇ ಉಳಿಯ ಬೇಕಾಗಿತ್ತು. ಮತ್ತೊಂದು ರೈಲು ನಿಲ್ದಾಣಕ್ಕೆ ಆಗಮಿಸುವವರೆಗೂ ಪ್ರಯಾಣಿಕರು ಅಲ್ಲೇ ಇರಬೇಕಾಯಿತು.


ಸುಮಾರು 15 ನಿಮಿಷಗಳ ಕಾಲ ರೈಲನ್ನ ನಿಲ್ದಾಣದಲ್ಲೇ ನಿಲ್ಲಿಸಲಾಗಿದ್ದು, ಅರಣ್ಯ ಇಲಾಖೆಯಂದ ಆಗಮಿಸಿದ್ದ ರಕ್ಷಣಾ ತಂಡಕ್ಕೆ ಹಾವನ್ನ ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ನಾಗರಾಜ ಸಿಬ್ಬಂದಿಯ ಕೈಗೆ ಸಿಗದೇ ಎಸ್ಕೇಪ್​ ಆಗಿದ್ದಾನೆ.