ನ್ಯೂಸ್

ಮರದ ಕೆಳಗೆ ಮಲಗಿದ್ದ ವ್ಯಕ್ತಿಗೆ ಎದ್ದಾಗ ಶಾಕ್! ಷರ್ಟ್ ಒಳಗೆ ಹರಿದಾಡುತ್ತಿತ್ತು ಕರಿ ನಾಗರಹಾವು...

Webdesk - Athul Damale

ನವದೆಹಲಿ: ಈತ, ಮೈ ತುಂಬಾ ದುಡಿದು, ಆರಾಮವಾಗಿ ಮರದ ಕೆಳಗಡೆ ಮಲಗಿದ್ದ. ಎದ್ದಾಗ ಷರ್ಟ್​ ಒಳಗಡೆ ಏನೋ ತಣ್ಣಗೆ ಹರಿದಾಡಿದ ಅನುಭವ. ಏನೆಂದೇ ತಿಳಿಯುತ್ತಿಲ್ಲ. ಆದರೆ ಒಮ್ಮೆಲೆ, ಷರ್ಟ್​ ಗುಂಡಿಗಳ ನಡುವಿನಿಂದ ಫಳಫಳನೆ ಹೊಳೆಯುತ್ತಿರುವ ಎರಡು ಕಣ್ಣುಗಳು ಕಂಡಿವೆ. ನೋಡನೋಡುತ್ತಿದ್ದಂತೆಯೇ ಅಲ್ಲಿ ಕರಿ ನಾಗರಹಾವಿನ ತಲೆ ಕಂಡಿದೆ! ಆ ವ್ಯಕ್ತಿಗೆ ಹೇಗೆ ಪ್ರತಿಕ್ರಿಯಿಸಬೇಕು? ಇಲ್ಲಿದೆ ಸಂಪೂರ್ಣ ವಿವರ...

ಈ ವಿಡಿಯೋವನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದು ಬರದೇ ಇದ್ದರೂ ಈ ವಿಡಿಯೋದಲ್ಲಿರುವ ವಿಚಾರ ಮಾತ್ರ ಭಯಾನಕ. ಈ ವೀಡಿಯೊದಲ್ಲಿ ಕೆಲವರು ಈತನ ಷರ್ಟ್‌ಗೆ ನುಗ್ಗಿದ ನಾಗರಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವ್ಯಕ್ತಿ ತೆರೆದ ಮೈದಾನದಲ್ಲಿ ಕೋಳಿನಿದ್ದೆ ಮಾಡುತ್ತಿದ್ದಾಗ ಹಾವು ಆತನ ಷರ್ಟ್​ ಒಳಗೆ ನುಗ್ಗಿದೆ. ವಿಚಿತ್ರ ಎಂದರೆ, ಈತ ಎಚ್ಚರವಾದಾಗ ಹಾವೂ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಅಲ್ಲಿದ್ದವರು, ಷರ್ಟ್​ನ ಗುಂಡಿಗಳನ್ನು ಒಂದೊಂದಾಗಿಯೇ ಬಿಚ್ಚಿ ವ್ಯಕ್ತಿಯನ್ನೂ ಹಾವನ್ನೂ ಕಾಪಾಡಿದ್ದಾರೆ. ಹಾವು ಎಲ್ಲಾದರೂ ಆ ವ್ಯಕ್ತಿಗೆ ಕಚ್ಚಿದ್ದರೆ, ಅದೂ ಸಾಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್, ವ್ಯಕ್ತಿಯು ಹಾವಿನಿಂದ ಕಚ್ಚಿಸಿಕೊಳ್ಳದೇ ಯಾವುದೇ ಅಪಾಯವಾಗದೇ ಪಾರಾಗಿದ್ದಾನೆ. ವಿಡಿಯೋದ ಕೊನೆಗೆ ಬೃಹತ್ ಗಾತ್ರದ ನಾಗರಹಾವು ಸ್ಥಳದಿಂದ ದೂರ ಸರಿಯುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಮರದ ಕೆಳಗೆ ಇನ್ನುಮುಂದೆ ನೀವು ನಿದ್ದೆ ಮಾಡುತ್ತೀರಿ ಎಂದಾದರೆ, ಈ ವಿಡಿಯೋ ನಿಮಗೆ ಎಚ್ಚರಿಕೆಯ ಕರೆಗಂಟೆಯೇ ಹೌದು!