ನ್ಯೂಸ್

ಶಾಲಾ ಬಿಸಿಯೂಟದಲ್ಲಿ ಹಾವು ಪತ್ತೆ: ಹಲವು ಮಕ್ಕಳು ಆಸ್ಪತ್ರೆಗೆ ದಾಖಲು

ಬಿಹಾರ: ಶಾಲಾ ಬಿಸಿಯೂಟದಲ್ಲಿ ಹಾವು ಪತ್ತೆಯಾಗಿ 150ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಫೋರ್ಬೆಸ್‌ಗಂಜ್‌ನ ಸರ್ಕಾರಿ ಶಾಲೆಯೊಂದರಲ್ಲಿ ಶನಿವಾರ ಮಕ್ಕಳಿಗೆ ಬಡಿಸಲಾಗಿದ್ದ ಮಧ್ಯಾಹ್ನದ ಊಟದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಕೋಲಾಹಲ ಉಂಟಾಯಿತು. ಶಾಲೆಯಲ್ಲಿ ತಕ್ಷಣ ಊಟದ ವಿತರಣೆಯನ್ನು ನಿಲ್ಲಿಸಿದರೂ, ಅದಾಗಲೇ ಆಹಾರವನ್ನು ತಿಂದಿದ್ದ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು.

ತಕ್ಷಣವೇ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಈ ಕುರಿತು ಮಾಹಿತಿ ಪಡೆದರು.(ಏಜೆನ್ಸೀಸ್​)