ಜಿಂಬಾಬ್ವೆ: ಕೆಲವು ವಿಚಿತ್ರ, ವಿಲಕ್ಷಣ ಮತ್ತು ಆಕರ್ಷಕ ಘಟನೆಗಳು ಕ್ಯಾಮರಾದಲ್ಲಿ ಸೆರೆಯಾಗಿ, ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತದೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಪೊಲೀಸರಿಗೆ ಮನೆ ಭಾಗ್ಯ ಮೂರು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟಿಸಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಭರವಸೆ
ಈ ಮುಖೇನ ಒಂದು ಘಟನೆಯನ್ನು ಶರವೇಗದಲ್ಲಿ ಜಗತ್ತಿನ ಮೂಲೆ ಮೂಲೆಗೂ ತಲುಪಿಸಿ, ಜನರಿಗೆ ತಿಳಿಸುವ ಕೆಲಸವನ್ನು ಇಂದಿನ ಟೆಕ್ನಾಲಿಜಿ ಮಾಡುತ್ತಿದೆ. ಈ ರೀತಿಯ ವೈರಲ್ ದೃಶ್ಯಗಳಿಗೆ ಇಲ್ಲೊಂದು ವಿಡಿಯೋ ಸೇರ್ಪಡೆಗೊಂಡಿದೆ. ಹಾವು ಎಂದಕ್ಷಣ ಪ್ರತಿಯೊಬ್ಬರಿಗೂ ಎದೆ ಝುಲ್ ಎನ್ನುವುದು ಸತ್ಯ. ಕಾರಣ ಹಾವಿನ ರೂಪ, ಮೈಬಣ್ಣ, ವಿಷಕಾರಿ ಎಂಬ ಕೆಲವು ವಿಷಯಗಳು ನಮ್ಮನ್ನೆಲ್ಲಾ ಭಯಭೀತರನ್ನಾಗಿ ಮಾಡಿಸುತ್ತದೆ.
ಹಾವುಗಳೊಂದಿಗೆ ಹುಡುಗಾಟ ಆಡಲು ಪ್ರಯತ್ನ ಪಟ್ಟ ಅದೆಷ್ಟೋ ಜನರು ಅದರ ಕಡಿತಕ್ಕೆ ತುತ್ತಾಗಿ ದುರಂತ ಅಂತ್ಯ ಕಂಡಿದ್ದಾರೆ. ಈ ಕುರಿತಂತೆ ಇದೇ ಸಾಮಾಜಿಕ ಜಾಲತಾಣದಲ್ಲಿ ಹಲವು ನಿದರ್ಶನಗಳನ್ನು ನಾವೆಲ್ಲಾ ನೋಡಿದ್ದೇವೆ. ಆದ್ರೂ ಅದರ ಅರಿವು ನಮ್ಮ ಜನಕ್ಕಿಲ್ಲ ಎಂಬುದು ಅನೇಕ ಘಟನೆಗಳ ಮೂಲಕ ತಿಳಿಯುತ್ತದೆ.
ಇಲ್ಲೊಂದು ಹೆಬ್ಬಾವು ಮನೆಯೊಳಗೆ ನೋಟಿನ ಕಂತೆಯನ್ನು ಹಿಡಿದು ಒಳಗೆ ಪ್ರವೇಶಿಸಿದ ದೃಶ್ಯವೊಂದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ. ನೋಟುಗಳನ್ನು ಹಿಡಿದು ಮನೆಯೊಳಗೆ ಹೋಗುತ್ತಿರುವ ಬೃಹತ್ ಆಕಾರದ ಹೆಬ್ಬಾವಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, (ಏಜೆನ್ಸೀಸ್).