ನವದೆಹಲಿ: ಮನೆಯೊಳಗೆ ನುಗ್ಗಿದ ಹಾವು ಟಿವಿ ಮುಂದೆ ಕುಳಿತು, ಸತತ 2 ಗಂಟೆಗಳ ಕಾಲ ಟಿವಿ ನೋಡಿದೆ ಅಂತೆ. ಈ ಕುರಿತಾದ ವಿಡಿಯೋವನ್ನು ಸ್ನೇಕ್ ಶಿವು ಚಿತ್ರದುರ್ಗ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಹಾಕಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಮನೆಯೊಳಗೆ ನುಗ್ಗಿದ ಹಾವು ಟಿವಿ ಮುಂದೆ ಕುಳಿತು, ಸತತ 2 ಗಂಟೆಗಳ ಕಾಲ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳನ್ನು ವೀಕ್ಷಿಸುತ್ತಿದೆ. ಹಾವು ಟಿವಿ ನೋಡುತ್ತಿರುವ ದೃಶ್ಯವನ್ನು ನೋಡಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ. “ಇದು ನಾಗಿಣಿ ಸೀರಿಯಲ್‌ಗೆ ಆಡಿಷನ್ ಕೊಡಲು ಬಂದಿರಬೇಕು, ಹಾವೂ ಸೀರಿಯಲ್ ನೋಡಬಹುದು ಎಂದು ನೆಟ್ಟಿಗರು ಕಾಮೆಂಟ್‌ಗಳು ಹರಿದಾಡುತ್ತಿವೆ.
ಹಾವು ಟಿವಿ ಮುಂದೆ ಕುಳಿತು ಸೀರಿಯಲ್ ನೋಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಇದನ್ನು ನೋಡಿದರೆ ತಮ್ಮ ತಳಿಯು ತಡೆಯಲಾಗದೆ ನಗುತ್ತಿದ್ದಾರೆ. ಸದ್ಯ ಎರಡು ಗಂಟೆಗೂ ಅಧಿಕ ಕಾಲ ಮನೆಯಲ್ಲಿದ್ದರು ಯಾರಿಗೂ ಯಾವುದೇ ತೊಂದರೆ ಕೊಡದೇ ಸಿರಿಯಲ್ ನೋಡುತ್ತಾ ಕೂತಿದ್ದು ಎಲ್ಲರನ್ನು ಎಚ್ಚರಿಗೊಳಿಸಿದೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ .
ಸಾಮಾನ್ಯವಾಗಿ ಇಂತಹ ವಿಚಿತ್ರ ಘಟನೆಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೇಗವಾಗಿ ಹರಡುತ್ತವೆ ಮತ್ತು ಜನರ ಗಮನ ಸೆಳೆಯುತ್ತವೆ. ಇದು ಕೂಡ ಆ ಮೂಲಕವೇ ಜನಪ್ರಿಯತೆ ಪಡೆದಿದೆ.