ಸಾಂರ್ಭಿಕ ಚಿತ್ರ 
ನ್ಯೂಸ್

ಹಾವು ಕಡಿದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಸಾವು

Haveri - Kariyappa Aralikatti

ಸವಣೂರ: ಹಾವು ಕಚ್ಚಿ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ತವರಮಳ್ಳಿಹಳ್ಳಿಯಲ್ಲಿ ಗುರುವಾರ ನಡೆದಿದೆ.
ಶರಣಪ್ಪ ತಿಪ್ಪಣ್ಣ ಕಬ್ಬೂರ (24) ಮೃತ ರೈತ.
ಇವರು ಜಮೀನಿನಲ್ಲಿ ನೀರು ಹಾಯಿಸುವ ಸಮಯದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.