ನ್ಯೂಸ್

ಬಸವ ವಚನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ರಾಣೆಬೆನ್ನೂರ: ಬಸವ ಜಯಂತಿ ಅಂಗವಾಗಿ ಇಲ್ಲಿಯ ನಿವೃತ್ತ ಲಿಂಗವಂತ ಸಮಾಜ ನೌಕರರ ಸಂಘದ ವತಿಯಿಂದ ನಗರದ ಚನ್ನೇಶ್ವರ ಮಠದಲ್ಲಿ ಶನಿವಾರ ಶಾಲಾ ಮಕ್ಕಳಿಗೆ ಬಸವಣ್ಣನವರ ವಚನ ಸ್ಪರ್ಧೆ ಜರುಗಿತು.
ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶ್ರದ್ಧಾ ಲಕ್ಕಣ್ಣವರ ಪ್ರಥಮ, ಆರಾಧನಾ ಹರಪನಹಳ್ಳಿ ದ್ವಿತೀಯ, ನಂದಾ ಕುರುವತ್ತಿ ತೃತೀಯ ಸ್ಥಾನ ಪಡೆದರು.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕೃತಿಕಾ ನಾಯಕ ಪ್ರಥಮ , ದೀಕ್ಷಿತಾ ಮಾವಿನತೋಪ ದ್ವಿತೀಯ, ಸಿದ್ಧಾಂತ ಮಾಕಾಳ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಸ್ಫೂರ್ತಿ ಚಪ್ಪರದಲ್ಲಿಮಠ ಪ್ರಥಮ, ನೀಲಮ್ಮ ಗಡೆದ ದ್ವಿತೀಯ, ಬಿ.ಎಸ್. ರಶ್ಮಿ ಮತ್ತು ಸಂಜನಾ ಅಡಕೆ ತೃತೀಯ ಸ್ಥಾನ ಪಡೆದರು.
ಮಠದ ಗೌರವ ಕಾರ್ಯದರ್ಶಿ ಅಮೃತಗೌಡ ಹಿರೇಮಠ ಸ್ಪರ್ಧೆ ಉದ್ಘಾಟಿಸಿದರು. ಹಿರಿಯರಾದ ಗಣೇಶಪ್ಪ ಕುಲಕರ್ಣಿ ನಿರ್ಣಾಯಕರಾಗಿ ಆಗಮಿಸಿದ್ದರು.
ಸಂಘದ ಸದಸ್ಯರಾದ ಎಸ್.ಎಸ್. ಜ್ಯೋತಿ, ಎಫ್.ಟಿ. ಕುಳೆನೂರ, ವಿ.ಎಂ. ಕರ್ಜಗಿ, ಎಚ್.ಎನ್. ಬಸನಗೌಡರ, ಎಂ.ಬಿ. ಬೆನಕಣ್ಣನವರ, ಎಸ್.ಬಿ. ಲಕ್ಕಣ್ಣನವರ, ಎನ್.ಎಸ್. ಪಾಟೀಲ, ಎಸ್.ಎಚ್. ಪಾಟೀಲ, ಎಸ್.ಬಿ. ಮೂಲೇರ ಮತ್ತಿತರರು ಉಪಸ್ಥಿತರಿದ್ದರು.
ವೀಣಾ ಕಾಮಟೆ ಹಾಗೂ ಅನಸೂಯಾ ರಾಠೋಡ ಪ್ರಾರ್ಥಿಸಿದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ನಿರೂಪಿಸಿದರು.