ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕರೊನಾ ಸೋಂಕು ತಗುಲಿದೆ. ಇಂದು ಟ್ವೀಟ್ ಮಾಡಿ, ತಮಗೆ ಕೊವಿಡ್-19 ತಗುಲಿದ್ದಾಗಿ ಅವರು ತಿಳಿಸಿದ್ದಾರೆ.
ಯಾವುದೇ ವಿಚಾರವನ್ನಾದರೂ ಘೋಷಣೆ ಮಾಡುವಾಗ ನಾನು ಶಬ್ದಗಳಿಗಾಗಿ ಹುಡುಕುವುದು ತುಂಬ ಕಡಿಮೆ. ಅತ್ಯಂತ ಸರಳವಾಗಿ ಹೇಳಬೇಕಾದ ವಿಷಯ ಹೇಳುತ್ತೇನೆ. ಹಾಗೇ ಇದೀಗ ನನಗೆ ಕೊವಿಡ್-19 ಸೋಂಕು ತಗುಲಿದ್ದನ್ನೂ ಅಷ್ಟೇ ಸರಳವಾಗಿ ವಿವರಿಸುತ್ತಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೂಡಲೇ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
ಸ್ಮೃತಿ ಇರಾನಿಯವರು ಕಳೆದ ಹಲವು ದಿನಗಳಿಂದಲೂ ಬಿಹಾರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ರಾಜ್ಯದ ಗೋಪಾಲ್ಗಂಜ್, ನೌಟಾನ್, ಕಲ್ಯಾಣ್ಪುರ್, ದಿಘಾ, ಬೋಧ್ಗಯಾ ಸೇರಿ ಹಲವು ಕಡೆಗಳಲ್ಲಿ ಪ್ರಚಾರಸಭೆಯಲ್ಲಿ ಮಾತನಾಡಿದ್ದರು. (ಏಜೆನ್ಸೀಸ್)