ನ್ಯೂಸ್

ನೇಪಥ್ಯಕ್ಕೆ ಸರಿಯಲಿದೆ ಸ್ಮಾರ್ಟ್​ಸಿಟಿ ಯೋಜನೆ

31ಕ್ಕೆ ಯೋಜನೆ ಮುಕ್ತಾಯ |ಬಾಕಿ ಕಾಮಗಾರಿ ನಗರ ಪಾಲಿಕೆಗಳಿಗೆ ಹಸ್ತಾಂತರ

| ರಮೇಶ ಜಹಗೀರದಾರ್ ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್​ಸಿಟಿ ಯೋಜನೆ ಮಾ.31ಕ್ಕೆ ಮುಕ್ತಾಯವಾಗಲಿದೆ. ಪ್ರಾಜೆಕ್ಟ್ ಮುಂದುವರಿಸುವ ಕುರಿತು ಕೇಂದ್ರ ಸರ್ಕಾರದಿಂದ ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ. ಕಳೆದ ಒಂದು ದಶಕದಿಂದ ದೇಶದ ನೂರು ನಗರಗಳಲ್ಲಿ ಅಭಿವೃದ್ಧಿಯ ಹೊಸ ವ್ಯಾಖ್ಯಾನ ಬರೆದಿದ್ದ ಈ ಮಿಷನ್ ನೇಪಥ್ಯಕ್ಕೆ ಸರಿಯುವುದು ಬಹುತೇಕ ಖಚಿತವಾಗಿದೆ.

ಸ್ಮಾರ್ಟ್ ಸಿಟಿ ಕಂಪನಿ ರೂಪದಲ್ಲಿ ರಚನೆಯಾಗಿತ್ತು. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೂ ಸಹ ತಾತ್ಕಾಲಿಕವಾಗಿಯೇ ನೇಮಿಸಿಕೊಳ್ಳಲಾಗಿತ್ತು. ವಿವಿಧ ಹುದ್ದೆಗಳನ್ನು ಎರವಲು ಸೇವೆ ಮೂಲಕ ಪಡೆದಿದ್ದು, ಅವರೆಲ್ಲ ಮಾತೃ ಇಲಾಖೆಗೆ ಮರಳಲಿದ್ದು, ತಾತ್ಕಾಲಿಕವಾಗಿ ನೇಮಕಗೊಂಡವರ ಸೇವಾವಧಿ ಮುಕ್ತಾಯವಾಗಲಿದೆ ಎಂದು ಹಿರಿಯ ಅಧಿಕಾರಿ ವಿವರಿಸಿದ್ದಾರೆ. ಹತ್ತು ವರ್ಷಗಳಿಂದ ಈ ಯೋಜನೆಯೊಂದಿಗೆ ಇಂಜಿನಿಯರುಗಳು, ತಾಂತ್ರಿಕ ಮತ್ತು ಇತರ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರು ಸೇರಿ 4 ಸಾವಿರ ಮಂದಿ ಗುರುತಿಸಿಕೊಂಡಿದ್ದರು.

ಕಾಣದ ರ್ತಾಕ ಅಂತ್ಯ: ದೊಡ್ಡ ನಿರೀಕ್ಷೆಯೊಂದಿಗೆ ಆರಂಭವಾದ ಈ ಮಿಷನ್ ರ್ತಾಕ ಅಂತ್ಯವನ್ನು ತಲುಪದೇ ಕೊನೆಗೊಳ್ಳುತ್ತಿದೆ. ಯೋಜನೆಯ ಅಪೂರ್ಣ ಕಾಮಗಾರಿಗಳ ಗತಿ ಏನು ಎಂಬುದು ಸೇರಿ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಈ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಉನ್ನತ ಮಟ್ಟದ ಸ್ಟೀರಿಂಗ್ ಸಮಿತಿಯು ಯೋಜನೆಯನ್ನು ಮುಂದುವರಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಈ ಮೂಲಕ ಇದು ವಿಸ್ತರಣೆಯಾಗಲ್ಲ ಎಂದು ಸ್ಪಷ್ಟವಾಗಿದೆ. ಪ್ರಸ್ತುತ ಸ್ಮಾರ್ಟ್​ಸಿಟಿ ಕಾಮಗಾರಿ ನಡೆಯುತ್ತಿದ್ದ ಕಡೆಗಳಲ್ಲಿ ಬಹುಪಾಲು ಕೆಲಸ ಮುಗಿದಿದೆ. ಮುಗಿಯದೇ ಇರುವ ಕಡೆಗಳಲ್ಲಿ ಅದನ್ನು ಸ್ಥಳೀಯ ನಗರಪಾಲಿಕೆಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ರಸ್ತೆ, ಚರಂಡಿ ಇತ್ಯಾದಿ ಸಿವಿಲ್ ಕಾಮಗಾರಿಗಳನ್ನು ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ವಹಿಸಬಹುದು. ಇನ್ನುಳಿದ ಕಾಮಗಾರಿಗಳ ನಿರ್ವಹಣೆ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಅಡಿಯಲ್ಲಿ ತಂತ್ರಜ್ಞಾನ ಆಧಾರಿತವಾದ ಅನೇಕ

ಪ್ರಾಜೆಕ್ಟ್​ಗಳಾಗಿವೆ. ಅವುಗಳಿಂದ ಪೊಲೀಸ್, ಕಂದಾಯ, ಪರಿಸರ ಇಲಾಖೆ, ಕೆಎಸ್​ಆರ್​ಟಿಸಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಅನುಕೂಲವಾಗಿದೆ. ವಿಶೇಷವಾಗಿ ಅತ್ಯಾಧುನಿಕ ಕ್ಯಾಮರಾಗಳನ್ನು ನಗರದ ವಿವಿಧ ವೃತ್ತ, ರಸ್ತೆಗಳಲ್ಲಿ ಅಳವಡಿಸಲಾಗಿದ್ದು ಸಂಚಾರ ವ್ಯವಸ್ಥೆಗೆ ಇದರಿಂದ ಸಹಾಯವಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಪೊಲೀಸರು ಅನೇಕ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳಲ್ಲಿ ವೆಬ್​ಕಾಸ್ಟಿಂಗ್ ಮಾಡಲು ಸಾಧ್ಯವಾಗಿದೆ.

ತಾಂತ್ರಿಕ ಪರಿಣಿತರು ಇಲ್ಲದೇ ಈ ವ್ಯವಸ್ಥೆಯನ್ನು ನಿರ್ವಹಿಸಲು ಆಗುವುದಿಲ್ಲ. ಯೋಜನೆಯ ಅವಧಿ ಮುಗಿ ಯುವುದರಿಂದ ಇನ್ನು ಮುಂದೆ ಈ ವ್ಯವಸ್ಥೆಯನ್ನು ನೋಡಿಕೊಳ್ಳುವವರು ಯಾರೆನ್ನುವ ಪ್ರಶ್ನೆ ಕೇಳಿಬಂದಿದೆ.

7 ವರ್ಷ ಮಾತ್ರ ಕಾಮಗಾರಿ: ಸ್ಮಾರ್ಟ್​ಸಿಟಿ ಯೋಜನೆಗೆ 2015 ರಲ್ಲಿ ಚಾಲನೆ ದೊರೆಯಿತು. ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಈ ಪ್ರಾಜೆಕ್ಟ್​ನ ಉದ್ದೇಶ ಮೂಲ ಸೌಲಭ್ಯ ಕಲ್ಪಿಸುವುದು, ಸುಸ್ಥಿರ ಅಭಿವೃದ್ಧಿ, ಸ್ವಚ್ಛ ಪರಿಸರ ನಿರ್ವಣದ ಜತೆಗೆ ಸ್ಮಾರ್ಟ್ ತಂತ್ರಜ್ಞಾನದ ನೆರವಿನಿಂದ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ಆಶಯವೂ ಇತ್ತು.

ಪ್ರತಿ ನಗರಕ್ಕೆ 1 ಸಾವಿರ ಕೋಟಿಯಂತೆ ನೂರು ನಗರಗಳಿಗೆ ಒಟ್ಟಾರೆ 1 ಲಕ್ಷ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿತ್ತು. ಈ ಯೋಜನೆಯನ್ನು 5 ವರ್ಷಗಳಲ್ಲಿ ಮುಗಿಸುವ ಗುರಿ ಹೊಂದಲಾಗಿತ್ತು. ಆದರೆ ಆರಂಭದಲ್ಲಿ ಕಂಪನಿ (ಎಸ್​ಪಿವಿ) ರಚಿಸುವುದಕ್ಕೇ ಒಂದು ವರ್ಷ ಹಿಡಿಯಿತು. ಮುಂದೆ ಕೋವಿಡ್ ಅವಧಿಯಲ್ಲಿ 2 ವರ್ಷ ಹಿನ್ನಡೆಯಾಯಿತು. ಹೀಗೆ ವಿಳಂಬಗೊಂಡು ಒಟ್ಟಾರೆ 7 ವರ್ಷ ಮಾತ್ರ ಕೆಲಸಗಳು ನಡೆದವು.

ವಿವಿಧ ಹಂತದಲ್ಲಿ ಕಾಮಗಾರಿ

ಚಂಡೀಗಢ ಮತ್ತು ಇತರ ಕೆಲವೇ ನಗರಗಳಲ್ಲಿ ಯೋಜನೆ ಶೇ.100 ಮುಕ್ತಾಯ ವಾಗಿದೆ. ಇನ್ನುಳಿದ ಕಡೆಗಳಲ್ಲಿ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ರಾಜ್ಯದ ಬೆಂಗಳೂರು, ತುಮಕೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಸ್ಮಾರ್ಟ್​ಸಿಟಿ ಯೋಜನೆ ಅನುಷ್ಠಾನಗೊಂಡಿದೆ. ದಾವಣಗೆರೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ಒಟ್ಟು 116 ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅವುಗಳ ಪೈಕಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ವಣದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ಕೆಲವು ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಇವೆ.