ತುಮಕೂರು: ತುಮಕೂರು ಸ್ಮಾರ್ಟ್ಸಿಟಿ ಲಿಮಿಟೆಡ್ನ ಮಹತ್ವದ ಯೋಜನೆಗಳಲ್ಲೊಂದಾದ ಸಮಗ್ರ ನಗರ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ( ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್ಮೆಂಟ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್)ಗೆ ಪ್ರಥಮ ಪ್ರಶಸ್ತಿ ಲಭಿಸಿದೆ.
ದೆಹಲಿ ಪ್ರಗತಿಮೈದಾನದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಮಾ. 19 ರಿಂದ 21ರವರೆಗೆ ಆಯೋಜಿಸಿದ್ದ 10ನೇ ಸ್ಮಾರ್ಟ್ ಸಿಟೀಸ್ ಇಂಡಿಯಾ-2025 ಹಾಗೂ 32ನೇ ಕನ್ವರ್ಜೆನ್ಸ್ ಇಂಡಿಯಾ 2025 ಎಕ್ಸ್ಪೋ ಕಾರ್ಯಕ್ರಮದಲ್ಲಿ ತುಮಕೂರಿನ ಸ್ಮಾರ್ಟ್ಸಿಟಿ ಯೋಜನೆ ಅಡಿ ಸ್ಥಾಪಿಸಿರುವ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ಗೆ ಪ್ರಶಸ್ತಿ ಸಿಕ್ಕಿದೆ. ದೇಶದ 100 ಸ್ಮಾರ್ಟ್ಸಿಟಿಗಳು ಈ ಎಕ್ಸ್ಪೋನಲ್ಲಿ ಭಾಗವಹಿಸಿದ್ದವು. ಸೈಬರ್ ಸೆಕ್ಯುರಿಟಿ ಆ್ಯಂಡ್ ಡೇಟಾ ಪ್ರೊಟೆಕ್ಷನ್ ಅವಾರ್ಡ್ ಅನ್ನು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರು ಆದ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸ್ವೀಕರಿಸಿದ್ದಾರೆ.
ಪ್ರಥಮ ಸ್ಮಾರ್ಟ್ಸಿಟಿ: ರಾಜ್ಯದ ಸ್ಮಾರ್ಟ್ ಸಿಟಿಗಳಲ್ಲಿ ಐಸಿಎಂಸಿಸಿಯನ್ನು ಸ್ಥಾಪಿಸಿ ಕಾರ್ಯಾರಂಭ ಮಾಡಿದ ಪ್ರಥಮ ಸ್ಮಾರ್ಟ್ಸಿಟಿ ತುಮಕೂರು ನಗರ. ಇ-&ಆಡಳಿತದ ಗುರಿಯೊಂದಿಗೆ ನಗರದ ಕಾರ್ಯಾಚರಣೆಗಳು, ಸಂಚಾರ ನಿಯಮ ಉಲ್ಲಂಘನೆಗಾಗಿ ಇ&-ಚಲನಿಂಗ್ ವ್ಯವಸ್ಥೆ, ಘನತ್ಯಾಜ್ಯ ಸಂಗ್ರಹಣಾ ವಾಹನಗಳ ಸಮರ್ಥ ಸ್ಥಳ ಟ್ರಾ$್ಯಕಿಂಗ್ ವ್ಯವಸ್ಥೆಯಿಂದ ಪರಿಣಾಮಕಾರಿ ಕಸ ಸಂಗ್ರಹಣೆ, ದಿನದ 24 ಗಂಟೆಗಳಲ್ಲಿ ನಗರದ ನಿಗಾವಣೆಗಾಗಿ ಮೊಬೈಲ್ ಕಣ್ಗಾವಲು ವಾಹನಗಳು, ಸಾರ್ವಜನಿಕ ಪ್ರಕಟಣೆಗಳು/ಎಚ್ಚರಿಕೆಗಳಿಗಾಗಿ ಸಾರ್ವಜನಿಕ ವಿಳಾಸ ವ್ಯವಸ್ಥೆ ಜತೆಗೆ ಡ್ಯಾಶ್ ಬೋರ್ಡ್ ಕ್ಯಾಮೆರಾಗಳು ಮತ್ತು ಪ್ಯಾನ್ ಟಿಲ್ಟ್ ಝೂಮ್ ಕ್ಯಾಮೆರಾಗಳ ಮೂಲಕ ಸಂಚಾರ ವ್ಯವಸ್ಥೆಯಲ್ಲಿ ಅಗಾಧ ಬದಲಾವಣೆ ತರಲಾಗಿದೆ.
ಐಸಿಎಂಸಿಸಿ ಕೇಂದ್ರವು ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಚುರುಕು ಸಂದೇಶ ರವಾನೆ, ವ್ಯತ್ಯಯಗೊಳಿಸಬಹುದಾದ ಸಂದೇಶ ರವಾನೆ ವ್ಯವಸ್ಥೆ ಹೊಂದಿದಎ. ಐಸಿಎಂಸಿಸಿ ವ್ಯವಸ್ಥೆಯಡಿ ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಗರದಾದ್ಯಂತ ನಿಗಾವಹಿಸಲಾಗುತ್ತಿದೆ. ಬಿ.ವಿ.ಅಶ್ವಿಜ ಸ್ಮಾರ್ಟ್ಸಿಟಿ ಎಂಡಿ