ಸುಮಲತಾ ಅಂಬರೀಷ್​ 
ನ್ಯೂಸ್

ದಿನವೂ ಬೇಕಾದರೆ ಕೆಆರ್​ಎಸ್​ನಲ್ಲೇ ಮಲಗುತ್ತೇನೆ; ಡಿಕೆಶಿ

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ವಿಷಯದಲ್ಲಿ ರಾಜಕೀಯ ವಾಕ್ಸಮರ ಆರಂಭವಾಗಿದೆ. ಬುಧವಾರದ ಬೆಳವಣಿಗೆಯಲ್ಲಿ ಸಂಸದೆ ಸುಮಲತಾ ಆವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹರಿತ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಅವರು ತೀಕ್ಷ್ಣ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.

ಸಂಸದೆ ಸುಮಲತಾ ಡಿ.ಕೆ ಶಿವಕುಮಾರ್ ಹೇಳಿದ್ದೇನು?

- ನೀರಾವರಿ ಸಚಿವರು ಇಲ್ಲಿಯವರೆಗೆ ಒಮ್ಮೆಯೂ ಕೆಆರ್‌ಎಸ್ ವೀಕ್ಷಣೆಗೆ ಬಂದಿಲ್ಲ, ಸ್ಥಳೀಯ ಶಾಸಕರು, ಸಂಸದರನ್ನು ಕರೆದು ಸಭೆ ಮಾಡಿಲ್ಲ. ಇಷ್ಟೆಲ್ಲಾ ಸಮಸ್ಯೆ ಆದರೂ ಸ್ಥಳೀಯರಿಂದ ವರದಿ ಪಡೆದಿಲ್ಲ.

- ನೀರಾವರಿ ಸಚಿವರು ಈ ರೀತಿ ಏಕೆ ಮಾಡುತ್ತಿದ್ದಾರೆ ನನಗೆ ಅರ್ಥವಾಗುತ್ತಿಲ್ಲ. ಆಗಸ್ಟ್‌ನಲ್ಲೇ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಎಲ್ಲರ ಸಲಹೆ ಸೂಚನೆ ಪಡೆದು ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೇ? ಬೇಡವೇ ಎಂದು ತಿರ್ಮಾನ ಮಾಡಬೇಕಿತ್ತು. ಅಂದೇ ತಿರ್ಮಾನ ತಗೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

- ಮಂಡ್ಯದಲ್ಲಿ ಈಗಾಗಲೇ ಅರ್ಧ ಬೆಳೆ ನಾಶವಾಗಿದೆ.ರೈತರಿಗೆ ಯಾವ ಪರಿಹಾರ ಎಂಬ ಕ್ಲಾರಿಟಿ ಸಿಗುತ್ತಿಲ್ಲ. ಇದು ಸರ್ಕಾರದ ಜವಾಬ್ದಾರಿ, ಕಾವೇರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ.

ಡಿಕೆಶಿ ಪ್ರತಿಕ್ರಿಯೆ:

- ನನಗೆಲ್ಲ ಗೊತ್ತಿದೆ. ನನ್ನದು ರಾಜಕಾರಣ. ನನ್ನದೂ ಅದೇ ರಕ್ತ. ಇಲ್ಲಿದ್ದುಕೊಂಡೇ ಎಲ್ಲ ಮಾಹಿತಿ ತರಿಸಿಕೊಂಡಿದ್ದೇನೆ.

- ದಿನೇ ಬೇಕಾದರೂ ಕೆ.ಆರ್.ಎಸ್‌ನಲ್ಲೇ ಮಲಗುತ್ತೇನೆ.

- ಎಂಪಿಯವರು ಇಲ್ಲಿ ರಾಜಕಾರಣ ಮಾಡುವುದು ಬೇಡ, ಅಷ್ಟೇ.