ಝೆಕ್(ಯೂರೋಪ್): ವಿಶ್ವದ ಅತಿ ಉದ್ಧದ ತೂಗು ಸೇತುವೆ ಸಿದ್ಧಗೊಂಡಿದ್ದು, ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಇನ್ನು ಆಕರ್ಷಕವಾಗಿರುವ ಈ ಸೇತುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಯುರೋಪ್ನ ಝೆಕ್ ರಿಪಬ್ಲಿಕನ್ ದೇಶದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬ್ರಿಡ್ಜ್ ನಿರ್ಮಾಣಕ್ಕೆ ಸತತ ಎರಡು ವರ್ಷಗಳ ಕಾಲ ಸಮಯ ತೆಗೆದುಕೊಳ್ಳಲಾಗಿದ್ದು, ಸದ್ಯ ಇದೀಗ ಪ್ರವಾಸಿಗರಿಗಾಗಿ ತೆರೆದಿದ್ದು, ಇಲ್ಲಿ ಭೇಟಿ ನೀಡಿದ ಪ್ರವಾಸಿಗರು ಕಣ್ತುಂಬಿಕೊಂಡು, ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದರ ಹೆಸರು ಸ್ಕೈ ಬ್ರಿಡ್ಜ್ 721 ಒಂದು ಬೆಟ್ಟದ ತುದಿಯಿಂದ ಮತ್ತೊಂದು ಬೆಟ್ಟದ ತುದಿವರೆಗೂ ಮೇಲ್ಸೇತುವೆ ನಿರ್ಮಾಣ ಮಾಡಿರುವುದು ಭಾರೀ ಆಕರ್ಷಣೆಗೆ ಕಾರಣವಾಗಿದೆ.
ಎರಡು ಬೆಟ್ಟಗಳ ನಡುವಿನ 95 ಮೀಟರ್ (312 ಅಡಿ) ಉದ್ದದಲ್ಲಿ ಕೇಬಲ್ ಕಾರ್ ಅಳವಡಿಸಲಾಗಿದ್ದು, ಈ ಬ್ರಿಡ್ಜ್ 721 ಮೀ. ಅಂದರೆ 2365 ಅಡಿ ಉದ್ಧವಿದೆ.1.2 ಮೀ.ಅಗಲ ಹೊಂದಿದೆ. ಪ್ರವಾಸಿಗರು 1125 ಮೀ.ಎತ್ತರದಲ್ಲಿ ಪ್ರವೇಶಿಸಿದರೆ, 10 ಮೀ.ಎತ್ತರಕ್ಕೆ ಬಂದು ನಿರ್ಗಮಿಸುತ್ತಾರೆ.
ಇದೇ ಮೊದಲ ಬಾರಿಗೆ ಎರಡು ಬೆಟ್ಟಗಳ ನಡುವೆ ಸೇತುವೆ ನಿರ್ಮಾಣವಾಗಿದ್ದು, ಇಡೀ ಅರಣ್ಯವನ್ನೇ ಈ ಸೇತುವೆ ಮೇಲ್ಭಾಗದಿಂದ ನೋಡಿ ಕಣ್ತುಂಬಿಕೊಳ್ಳಬಹುದು. ಆದರೆ ಇದು ಇರುವುದು ಯುರೋಪ್ನಲ್ಲಿ ಯುರೋಪ್ ಪ್ರವಾಸ ಕೈಗೊಂಡರೆ ಈ ಮೇಲ್ಸೇತುವೆ ಮೇಲೆ ನಡೆದಾಡಬಹುದು.
ಈ ಸೇತುವೆ ನಿರ್ಮಿಸಲು 200 ಮಿಲಿಯನ್ ಕ್ರೌನ್ಸ್ ಅಂದರೆ 8.4 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ನೇಪಾಳದ ಬಾಗಲೂಂಗ್ ಪರ್ಬತ್ ಬ್ರಿಡ್ಜ್ ವಿಶ್ವದ ಅತಿ ಉದ್ದದ ಸೇತುವೆ ಎಂದು ಗಿನ್ನಿಸ್ ದಾಖಲೆ ಬರೆದಿತ್ತು. ಇದೀಗ ಈ ಮೇಲ್ಸೇತುವೆ ಇದನ್ನು ಸರಿಗಟ್ಟಿದೆ. (ಏಜೆನ್ಸೀಸ್)