????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ನ್ಯೂಸ್

ತಾಲೂಕಿನ ಅಭಿವೃದ್ದಿಗೆ ಪ್ರಮಾಣಿಕವಾಗಿ ಶ್ರಮಿಶೋಣ

ಎ. ಆರ್. ರಘುರಾಮ

ಸಕಲೇಶಪುರ: ಇಲಾಖೆಯ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತಾಲೂಕಿನ ಅಭಿವೃದ್ದಿಗೆ ಪ್ರಮಾಣಿಕವಾಗಿ ಶ್ರಮಿಶೋಣ ಎಂದು ತಹಸೀಲ್ದಾರ್ ಕೆ.ಎಂ ಸುಪ್ರೀತಾ ಕರೆನೀಡಿದರು.

ಮಿನಿವಿಧಾನಸೌಧದಲ್ಲಿ ಕರೆಯಲಾಗಿದ್ದ ಜನಸ್ಪಂದನ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಜನಸ್ಪಂದನಾ ಸಭೆಯ ಯಶಸ್ಸಿಗೆ ಎಲ್ಲ ಅದಿಕಾರಿಗಳು ಸಮರ್ಥವಾಗಿ ಕೆಲಸ ಮಾಡುವ ಮೂಲಕ ತಮ್ಮ ಕೂಡುಗೆಗಳನ್ನು ನೀಡಬೇಕು ಅಲ್ಲದೆ ತಮ್ಮ ಇಲಾಖೆಯ ವ್ಯಾಪ್ತಿಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಮೂಲಕ ಫಲಾನುಭವಿಗಳಿಗೆ ಸೂಕ್ತಸಮಯದಲ್ಲಿ ಸೌಲಭ್ಯಗಳನ್ನು ದೊರಕಿಸುವಂತ ಕೆಲಸವಾಗ ಬೇಕಿದೆ. ವಿನಕಾರಣ ಕಾಲಹರಣ ಮಾಡುವ ಮೂಲಕ ರೈತರನ್ನು ಅಲೆಸುವುದು ಅಕ್ಷಮ್ಯ. ಇಲಾಖೆಗಳ ನಡುವೆ ಸೌಹರ್ದ ಸಂಬಂಧಗಳಿದ್ದಾಗ ಮಾತ್ರ ಸರ್ಕಾರಿ ಕೆಲಸಗಳು ವೇಗವಾಗಿ ನಡಯಲಿವೆ. ಆದ್ದರಿಂದ, ಪರಸ್ಪರ ಇಲಾಖೆ ಮುಖ್ಯಾಧಿಕಾರಿಗಳು ನಿರಂತರ ಸಂಪರ್ಕದಲ್ಲಿರ ಬೇಕು. ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಎಲ್ಲ ಇಲಾಖೆ ಅಧಿಕಾರಿಗಳು ಎಚ್ಚರದಿಂದ ಇರುವ ಮೂಲಕ ತಮ್ಮ ಪಾಲಿನ ಕರ್ತವ್ಯವನ್ನು ಸೂಕ್ತ ಸಮಯದಲ್ಲಿ ಮುಗಿಸ ಬೇಕು ಎಂದರು.

ಈ ವೇಳೆ ತಾಲೂಕು ಶಿರಸ್ತೆಧಾರ್ ರವಿಕುಮಾರ್,ಪಟ್ಟಣ ಠಾಣೆ ವೃತ್ತ ನಿರೀಕ್ಷಕ ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.