ನ್ಯೂಸ್

Fact Check| ಆರು ವರ್ಷದ ಹಳೆಯ ಫೋಟೋ ಲಾಕ್​ಡೌನ್​ ಸಮಯದಲ್ಲಿ ಸಂಚಲನ ಸೃಷ್ಟಿಸಿತು!

ನವದೆಹಲಿ: ಲಾಕ್​ಡೌನ್​ ಅವಧಿಯಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟ ಹೇಳ ತೀರದು. ಸಾರಿಗೆ ಹಾಗೂ ಆಹಾರ ವ್ಯವಸ್ಥೆ ಇಲ್ಲದೆ ಕಾರ್ಮಿಕರು ನೂರಾರು ಕಿ.ಮೀ. ನಡೆದು ತಮ್ಮ ಗ್ರಾಮಗಳಿಗೆ ತೆರಳಿದರು.

ಕಾರ್ಮಿಕರ ವಲಸೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಎಲ್ಲರ ಗಮನ ಸೆಳೆದಿದ್ದವು.

ಈ ಸಂದರ್ಭದಲ್ಲಿ ಮಹಿಳೆ ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಸೈಕಲ್​ ತುಳಿಯುತ್ತಿರುವ ದೃಶ್ಯ ವೈರಲ್​ ಆಗಿ ಎಲ್ಲರ ಮನ ಕಲಕುವಂತಿತ್ತು. ಹೀಗಾಗಿ ಹಲವು ತಾಸುಗಳಲ್ಲಿ ಸಾವಿರಾರು ಮಂದಿ ಚಿತ್ರವನ್ನು ವೀಕ್ಷಿಸಿದ್ದರು.

ಎನ್‌ಎಸ್‌ಯುಐನ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ಜಖರ್ ಈ ಚಿತ್ರವನ್ನು ಹಿಂದಿಯ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ಇದರ ಅರ್ಥ“ ರಾಜಕೀಯಕ್ಕಿಂತ ಮೇಲೇರಿ. ಸೂಕ್ಷ್ಮವಾಗಿರಬೇಡಿ. ಈ ವಲಸಿಗರ ನೋವನ್ನು ನೋಡಿ ಮತ್ತು ಅನುಭವಿಸಿ ಎಂದು ಬರೆದಿದ್ದಾರೆ.

ಆದರೆ ಈ ವೈರಲ್​ ಆದ ಫೋಟೋ ಲಾಕ್​ಡೌನ್​ ಸಮಯದಲ್ಲ. 6 ವರ್ಷಗಳ ಹಿಂದಿನ ಫೋಟೋ ಎಂದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ. ಈ ಫೋಟೋ ನೆರೆ ರಾಜ್ಯ ನೇಪಾಳದ್ದು ಎಂಬುದು ಕೂಡ ತಿಳಿದು ಬಂದಿದೆ.

ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಫೋಟೋ 6 ವರ್ಷದ ಹಿಂದಿನದು.

ರಿವರ್ಸ್ ಸರ್ಚ್ ಮತ್ತು ಗೂಗಲ್ ಮುಂಗಡ ಹುಡುಕಾಟದ ಸಂಯೋಜನೆಯನ್ನು ಬಳಸಿಕೊಂಡು, ಫೇಸ್‌ಬುಕ್ ನೇಪಾಳದ ಗುಂಜ್​ನಲ್ಲಿ ಜುಲೈ 1, 2014 ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿದೆ. ಹೀಗಾಗಿ ಲಾಕ್​ಡೌನ್​ ಹಾಗೂ ಈ ಚಿತ್ರಕ್ಕೆ ಯಾವುದೇ ಸಂಬಂಧ ಇಲ್ಲ ಎಂಬುದು ಪತ್ತೆಯಾಗಿದೆ. (ಏಜೆನ್ಸೀಸ್​)