ಚಾಮರಾಜನಗರದಲ್ಲಿ ಆಯೋಜಿಸಿದ್ದ ಅಂಗವಿಕಲ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಭರ್ಜಿ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಪ್ರಕಾಶ್‌ನನ್ನು ಶಿಕ್ಷಕರು ಅಭಿನಂದಿಸಿದರು. ಶಿವಲಿಂಗನಾಯಕ, ಧರ್ಮಲಿಂಗಂ, ರಾಜು ಇತರರು ಇದ್ದರು.  
ನ್ಯೂಸ್

ರಾಜ್ಯ ಮಟ್ಟಕ್ಕೆ ಆರು ವಿದ್ಯಾರ್ಥಿಗಳು ಆಯ್ಕೆ

ಶಿವಶಂಕರ್ ಎಂ. ಹೆಬ್ಬಳ್ಳ

ಕ್ರೀಡಾಕೂಟದಲ್ಲಿ ಅಂಗವಿಕಲ ಮಕ್ಕಳ ಸಾಧನೆ

ಹನೂರು: ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂಗವಿಕಲ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹನೂರು ಶೈಕ್ಷಣಿಕ ವಲಯದ 6 ಮಕ್ಕಳು 9 ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಭರ್ಜಿ ಎಸೆತದಲ್ಲಿ ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಕಾಶ್ ಪ್ರಥಮ ಸ್ಥಾನ ಪಡೆದಿದ್ದಾನೆ. ಜಾವಲಿನ್, ಗುಂಡು ಎಸೆತ ಹಾಗೂ 100 ಮೀ. ಓಟದಲ್ಲಿ ಶ್ರೀ ವಿವೇಕಾನಂದ ಪ್ರೌಢಶಾಲೆಯ ರಶಿಕಲಾ, ಗುಂಡು ಎಸೆತದಲ್ಲಿ ಬಿ.ಎಂ.ಜಿ. ಸರ್ಕಾರಿ ಪ್ರೌಢಶಾಲೆಯ ನಾಗವೇಣಿ, ಜಾವಲಿನ್, ಗುಂಡು ಎಸೆತದಲ್ಲಿ ಕಾಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಶಾಂತ್, ಮಂಗಲ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಮೋದ್ ಹಾಗೂ ರಾಮಾಪುರ ಸರ್ಕಾರಿ ಪ್ರೌಢಶಾಲೆಯ ಕಾರ್ತಿಕ್ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಮಧುಗಿರಿಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಉತ್ತಮ ಸಾಧನೆಗೈದು ಶೈಕ್ಷಣಿಕ ವಲಯಕ್ಕೆ ಕೀರ್ತಿ ತಂದು ಕೊಟ್ಟಿರುವ ವಿದ್ಯಾರ್ಥಿಗಳು, ಅಗತ್ಯ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರು ಹಾಗೂ ಮಾರ್ಗದರ್ಶಿ ಸಂಸ್ಥೆಯ ಕಾರ್ಯಕರ್ತರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ ಹಾಗೂ ಅಂಗವಿಕಲ ಮಕ್ಕಳ ವಿಶೇಷ ಶಿಕ್ಷಕ ಕೃಷ್ಣ ಅಭಿನಂದಿಸಿದ್ದು, ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದ್ದಾರೆ.