ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ರೌಡಿಶೀಟರ್ ನರೇಂದ್ರನ ಮೇಲೆ ಹಲ್ಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಂದಿನಿ ಲೇಔಟ್ ನಿವಾಸಿಗಳಾದ ರಮೇಶ್(೨೫) ಸಂಕೇತ್(೩೦), ದೀಕ್ಷಿತ್(೨೨), ತೇಜಸ್(೩೦), ಅರುಣ್(೨೫) ಮತ್ತು ವಿಜಯ್‌ಕುಮಾರ್(೨೫) ಬಂಧಿತರು.
ಆರೋಪಿಗಳು ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ನರೇಂದ್ರ ಅಲಿಯಾಸ್ ದಾಸ (೨೨) ಎಂಬಾತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಲಗ್ಗೆರೆ ಹಳೇ ಬಸ್ ನಿಲ್ದಾಣದ ಬಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆ.೨೬ರ ರಾತ್ರಿ ೧೧ ರ ವೇಳೆ ಕಪಿಲಾನಗರದ ೪ನೇ ಕ್ರಾಸ್‌ನ ಸ್ನೇಹಿತ ವಿಕ್ರಮ್ ಮನೆಯಲ್ಲಿ ನರೆಂದ್ರ ಮತ್ತು ಆತನ ಸಹಚರರ ತಂಡ ಪಾರ್ಟಿ ಮಾಡುತ್ತಿತ್ತು. ಈ ವೇಳೆ ರಮೇಶ್ ಹಾಗೂ ಸಹಚರರು ನರೇಂದ್ರನ ಮೇಲೆ ಹಲ್ಲೆ ಮಾಡಿದ್ದರು. ನರೇಂದ್ರ ಗಾಯಗೊಂಡು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಈತನ ಸಹಚರರು ಜೋರಾಗಿ ಕಿರುಚಾಡಿದ್ದರು. ಆಗ ಎದುರಾಳಿ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.