ಬಿಹಾರ: ರಾಜ್ಯದ ಗೋಪಾಲಗಂಜ್ನಲ್ಲಿ ತಾಜಿಯಾ ಮೆರವಣಿಗೆಯ ವೇಳೆ ವಿದ್ಯುತ್ ಪ್ರವಹಿಸಿ 8 ಮಂದಿ ಸುಟ್ಟು ಕರಕಲಾದ ಘಟನೆ ಇಂದು ಶುಕ್ರವಾರ ಉಚ್ಕಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಪುರ್ ಧರಮ್ ಚಕ್ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಮೆರವಣಿಗೆಯಲ್ಲಿ ನೂಕುನುಗ್ಗಲು ಉಂಟಾಯಿತು. ಎಲ್ಲಾ ಗಾಯಾಳುಗಳನ್ನು ಗೋಪಾಲಗಂಜ್ ಸದರ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. ಮೊಹರಂ ನಿಮಿತ್ತ ಉಚ್ಕಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಧರಮ್ ಚಕ್ ಗ್ರಾಮದಲ್ಲಿ ಶುಕ್ರವಾರ ತಾಜಿಯಾ ಮೆರವಣಿಗೆ ಮಾಡಲಾಯಿತು ಎಂದು ಹೇಳಲಾಗಿದೆ.
ಮೆರವಣಿಗೆ ವೇಳೆ ಮೇಲಿನಿಂದ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಹಸಿರು ಬಿದಿರು ಹಾಗೂ ಕೆಲವು ಮರದ ಕೊಂಬೆಗಳು ತಗುಲಿದ ಪರಿಣಾಮ ಗುಂಪಿನಲ್ಲಿದ್ದ 8 ಮಂದಿಗೆ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಸುಟ್ಟು ಕರಕಲಾಗಿದ್ದಾರೆ. ವಿದ್ಯುತ್ ಪ್ರವಹಿಸಿದ್ದರಿಂದ ಮೆರವಣಿಗೆಯಲ್ಲಿ ನೂಕುನುಗ್ಗಲು ಉಂಟಾಯಿತು.
ಮೊಹರಂ ಪ್ರಯುಕ್ತ ಗೋಪಾಲಗಂಜ್‌ನ ವಿವಿಧೆಡೆ ತಾಜಿಯಾ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಗೋಪಾಲಗಂಜ್ ಎಸ್‌ಪಿ ಸ್ವರ್ಣ ಪ್ರಭಾತ್ ತಿಳಿಸಿದ್ದಾರೆ. ಮೆರವಣಿಗೆಯ ವೇಳೆ ಕೆಲವರು ಕೈಯಲ್ಲಿ ಹಸಿರು ಬಿದಿರು, ಮರದ ಕೊಂಬೆಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೇಲಿನಿಂದ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಹಸಿರು ಬಿದಿರು, ಮರದ ಕೊಂಬೆಗಳು ತಾಗಿವೆ. ಈ ವೇಳೆ ನೆರೆದಿದ್ದ ಜನರಿಗೆ ವಿದ್ಯುತ್ ಸ್ಪರ್ಶಿಸಿದೆ. ಪರಿಣಾಮ ಈ ವಿದ್ಯುತ್ ಪ್ರವಾಹದಿಂದ 8 ಜನರು ಸುಟ್ಟು ಕರಕಲಾದರು.
ಸ್ಥಳಕ್ಕೆ ಉಚ್ಕಗಾಂವ್ ಪೊಲೀಸರು ಆಗಮಿಸಿದ್ದು, ಗಾಯಾಳುಗಳನ್ನು ಗೋಪಾಲಗಂಜ್ ಸದರ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಸದ್ಯ ಗಾಯಾಳುಗಳ ಸ್ಥಿತಿ ಸಹಜವಾಗಿದೆ.
ಘಟನೆ ಬಗ್ಗೆ ವಿದ್ಯುತ್ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಗಾಯಾಳುಗಳನ್ನು ನೋಡಲು ಗೋಪಾಲ್‌ಗಂಜ್ ಸದರ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಸಮಾಜ ಸೇವಕ ಅನಸ್ ಸಲಾಂ ಹೇಳಿದ್ದಾರೆ.