ಆಂಧ್ರ ಪ್ರದೇಶ: ( Car Accident ) ಕಾರಿನ ಟೈರ್ ಸಿಡಿದು ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ 6 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಘಟನೆ ಅನಂತಪುರ ಜಿಲ್ಲೆಯ ಶಿಂಗನಮಲ ಮಂಡಲ ನಾಯನಪಲ್ಲಿ ಕ್ರಾಸ್ ಬಳಿ ನಡೆದಿದೆ.
ಸಂತೋಷ್, ಷಣ್ಮುಖ, ವೆಂಕನ್ನ, ಶ್ರೀಧರ್, ಪ್ರಸನ್ನ ಹಾಗೂ ವೆಂಕಿ ಮೃತ ದುರ್ದೈವಿಗಳು. ಮೃತರೆಲ್ಲ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಎಂದು ತಿಳಿದುಬಂದಿದೆ. ಕಾರಿನ ಟೈರ್ ಸಿಡಿದು ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತರು ಅನಂತಪುರದ ಇಸ್ಕಾನ್ ಸಂಸ್ಥೆಗೆ ಸೇರಿದವರು. ತಾಡಿಪತ್ರಿಯಿಂದ ಅನಂತಪುರಕ್ಕೆ ಕಾರು ಬರುತ್ತಿತ್ತು ಎನ್ನಲಾಗಿದೆ. ತಾಡಿಪತ್ರಿ ನಗರದಲ್ಲಿ ಸಂಕೀರ್ತನೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹೀಗಾಗಿ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.