ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಪ್ರಗತಿ ಸಾಧಿಸಿರುವ ಪ್ರಮುಖ 20 ನಗರಗಳ ಪಟ್ಟಿ ಯನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ್ದು, ರಾಜ್ಯದ ದಾವಣಗೆರೆ ಕೂಡ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಗುಜರಾತ್ನ ಅಹಮದಾಬಾದ್ ಮೊದಲ ಸ್ಥಾನದಲ್ಲಿದೆ.
100 ಸ್ಮಾರ್ಟ್ ಸಿಟಿಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಹಿಂದಿರುವ ಕೊನೆಯ 20 ನಗರಗಳಲ್ಲಿ ಪ್ರಗತಿ ಸಾಧಿಸಲು ಟಾಪ್ 20 ನಗರಗಳ ಜತೆ ಇವುಗಳನ್ನು ಹೊಂದಿಸಲಾಗಿದೆ. ಇದಕ್ಕಾಗಿ ’ಸಿಸ್ಟರ್ ಸಿಟಿ’ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಈ ಪ್ರಗತಿ ಸಾಧಿಸುವ ನಗರಗಳು ಯೋಜನೆ ಅನುಷ್ಠಾನಕ್ಕೆ ಅಳವಡಿಸಿಕೊಂಡ ಮಾರ್ಗವನ್ನು ಹಿನ್ನಡೆಯಲ್ಲಿರುವ ನಗರಗಳು ಅನುಸರಿಸಬೇಕು ಮತ್ತು 100 ದಿನಗಳ ಒಳಗಾಗಿ ಅಭಿವೃದ್ಧಿಗೊಳಿಸಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ.
ಉತ್ತಮ ಮತ್ತು ಕಳಪೆ ಪ್ರಗತಿಯ ನಗರಗಳನ್ನು ಪ್ರಾದೇಶಿಕವಾಗಿ ಮತ್ತು ಸಾಂಸ್ಕ್ರತಿಕವಾಗಿ ಸಾಮ್ಯತೆ ಆಧಾರದ ಮೇಲೆ ಸಿಸ್ಟರ್ ಸಿಟಿಗಳಾಗಿ ಜೋಡಿಸಲಾಗಿದೆ. ಫೆ.20ರೊಳಗಾಗಿ ಈ ಎರಡು ಜಂಟಿ ನಗರಗಳ ಸ್ಮಾರ್ಟ್ ಸಿಟಿ ಯೋಜನೆಯ ಸಿಇಒ ಮತ್ತು ನಿರ್ದೇಶಕರು ಸಭೆ ನಡೆಸಿ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ. 100 ದಿನಗಳ ನಂತರ ಸಚಿವಾಲಯ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತದೆ.
ವಾರಾಣಸಿ-ಅಮೃತಸರ ನಾಸಿಕ್-ಜಮ್ಮು ಆಗ್ರಾ-ಪುದುಚೆರಿ ಅಹಮದಾಬಾದ್-ಚಂಡೀಗಢ ಭೋಪಾಲ್-ಐಜ್ವಾಲ್ ಅಮರಾವತಿ-ಅಟಲ್ನಗರ ಡೆಹರಾಡೂನ್-ಶಿಲ್ಲಾಂಗ್ ರಾಂಚಿ-ಶಿಮ್ಲಾ ಪುಣೆ-ಧರ್ಮಶಾಲಾ ವಿಶಾಖಪಟ್ಟಣ-ದಿವ್ ಉದಯಪುರ್-ಇಟಾನಗರ್ ಇಂದೋರ್-ಗುವಾಹಟಿ ಕೋಟಾ-ಪಾಸಿಘಾಟ್ ಬೆಲ್ಲೋರ್-ಕರವಟ್ಟಿ (ಲಕ್ಷದ್ವೀಪ) ಸೂರತ್-ಸಹಾರನ್ಪುರ ವಡೋದರಾ-ಮುರ್ದಾಬಾದ್ ಕಾನ್ಪುರ-ಕರಿಂನಗರ ನಾಗ್ಪುರ-ಪೋರ್ಟ್ಬ್ಲೇರ್ ತಿರುಪ್ಪುರ್-ಸಿಲವಾಸ ದಾವಣಗೆರೆ-ಬರೇಲಿ