ತರೀಕೆರೆ: ನಾಡಿನ ಸರ್ವತೋಮುಖ ಬೆಳವಣಿಗೆಗೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಶುಕ್ರವಾರ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್‌ಎಂವಿ ಅವರ ಅಸಾಮಾನ್ಯ ಸಾಧನೆಯಿಂದ ಬೆಂಗಳೂರು, ಮೈಸೂರು ಸೇರಿದಂತೆ ಇಡೀ ರಾಜ್ಯಸುಭಿಕ್ಷವಾಗಿರಲು ಸಾಧ್ಯವಾಗಿದೆ ಎಂದರು.
ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯರವರು ಭಾರತ ಹೆಮ್ಮೆ ಪಡುವ ವ್ಯಕ್ತಿಯಾಗಲು ಅವರ ಸಮರ್ಪಣಾ ಭಾವ ಪ್ರಮುಖ ಕಾರಣ. ಇಂದಿನ ಇಂಜಿನಿಯರ್‌ಗಳು ಅವರಿಂದ ಪ್ರೇರಿತರಾಗಿ ಹೊಸ, ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಮುನ್ನುಡಿ ಬರೆಯಬೇಕು ಎಂದು ಹೇಳಿದರು.
ಲೋಕೋಪಯೋಗಿ ಎಇಇಜಿ.ಎ.ನಾಗೇಂದ್ರಪ್ಪ ಮಾತನಾಡಿ, ಸರ್‌ಎಂವಿ ಸರಳ ಜೀವನ, ಕಾರ್ಯದಕ್ಷತೆ ಹಾಗೂ ಸಮಯ ಪಾಲನೆ ಅನುಸರಣೀಯ ಎಂದರು.
ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೊಸಿಯೇಷನ್ ಅಧ್ಯಕ್ಷ ನವೀನ್ ಜಿ.ನಾಯ್ಕ, ಗೌರವಾಧ್ಯಕ್ಷ ಟಿ.ಆರ್.ಮುರುಳಿ, ಉಪಾಧ್ಯಕ್ಷ ಟಿ.ಯು.ವಸಂತ್‌ಕುಮಾರ್, ಕಾರ್ಯದರ್ಶಿ ಎಸ್.ಎಂ.ರವಿಕುಮಾರ್, ಖಜಾಂಚಿ ಬಿ.ಓ.ಚೇತನ್, ಸಂಘಟನಾ ಕಾರ್ಯದರ್ಶಿ ವಿನಯ್ ಅಭಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಚಿದಾನಂದಪ್ಪ, ಪಿಆರ್‌ಡಿ ಎಇಇ ಎಂ.ಜೈನುಲ್ಲಾಬುದೀನ್, ನಿವೃತ್ತ ಎಇಇ ಬಿ.ವಾಗೀಶ್ ಮತ್ತಿತರರಿದ್ದರು.