ಸಾಂದರ್ಭಿಕ ಚಿತ್ರ 
ನ್ಯೂಸ್

ನಿರ್ಜನ ಪ್ರದೇಶದಲ್ಲಿ ವಿಶೇಷ ಚೇತನ ಯುವತಿಯನ್ನು ಬೆನ್ನಟ್ಟಿ, ಅತ್ಯಾಚಾರ ಎಸಗಿದ ಪಾಪಿಗಳು ! ದೃಶ್ಯ ಸಿಸಿಟಿಯಲ್ಲಿ ಸೆರೆ | woman

woman: 21 ವರ್ಷದ ವಿಶೇಷಚೇತನ ಯುವತಿಯೊಬ್ಬಳನ್ನು ಕೆಲವು ಬೈಕ್​ ಸವಾರರು ಬೆನ್ನಟ್ಟಿ ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಲ್​ರಾಮ್​ಪುರದಲ್ಲಿ ಬೆಳಕಿಗೆ ಬಂದಿದೆ. ಇನ್ನು ಯುವತಿಯನ್ನು ಬೆನ್ನಟ್ಟಿರುವ ದೃಶ್ಯ ಹಿರಿಯ ಪೊಲೀಸ್​ ಅಧಿಕಾರಿಗಳ ನಿವಾಸದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಏನು?

ಈ ಪ್ರಕರಣವು ಸೋಮವಾರ ರಾತ್ರಿ (ಆ.11) ರಂದು ನಡೆದಿದೆ. ಯುವತಿಯು ತನ್ನ ಮನೆಯಿಂದ ಹತ್ತಿರದಲ್ಲಿರುವ ಆಕೆಯ ಮಾವನ ಮನೆಗೆ ತೆರಳಿದ್ದು, ಅಲ್ಲಿಂದ ವಾಪಸ್ಸು ಬರುವಾಗ ಓರ್ವ ಬೈಕ್​ ಸವಾರ ಒತ್ತಾಯದಿಂದ ಆಕೆಯನ್ನು ತನ್ನ ಬೈಕ್​ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್​ ಪಾಂಡೆ ತಿಳಿಸಿದ್ದಾರೆ.

ಯುವತಿ ಮನೆಗೆ ಬಾರದಿರುವುದರಿಂದ ಆಕೆಯ ಕುಟುಂಬಸ್ಥರು ಹುಡುಕಾಡಲು ಪ್ರಾರಂಭಿಸಿದ್ದಾರೆ. ನಂತರ ಪೊಲೀಸ್​ ಠಾಣೆ ಹತ್ತಿರದಲ್ಲಿರುವ ಪೊದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆಕೆಯ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುವದನ್ನು ಗಮನಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಎಚ್ಚರಗೊಂಡ ಆಕೆ, ಬೈಕ್ ಸವಾರರು ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾಳೆ.

ವೈದ್ಯರು ಹೇಳಿದ್ದೇನು?

ಯುವತಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇನ್ನು ಸಂತ್ರಸ್ತೆಯಿಂದ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುವುದಾಗಿ ಪೋಲೀಸರು ತಿಳಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ್ದು, ಕುಟುಂಬದ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದಿದ್ದಾರೆ. ಯುವತಿ ಸಿಕ್ಕಂತಹ ಜಾಗದಲ್ಲಿರುವ ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. (ಏಜೆನ್ಸೀಸ್​)