ತಿ.ನರಸೀಪುರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವರಾಜು, ಕಲಿಯೂರು ಶಿವಣ್ಣ, ಕನ್ನಹಳ್ಳಿ ಲಕ್ಷ್ಮಣ, ಕೆಬ್ಬೆ ಮಧು, ಸೋಸಲೆ ಕಾರ್ತಿಕ್, ಉಕ್ಕಲಗೆರೆ ರಾಜು, ಎಂ.ರಂಗರಾಜು ಇದ್ದರು 
ನ್ಯೂಸ್

ಸಿಂಗ್ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ

ತಿ.ನರಸೀಪುರ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಬಸವರಾಜು ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ ಆರ್ಥಿಕ ತಜ್ಞ ಸಿಂಗ್ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.

ಮುಖಂಡರಾದ ಕಲಿಯೂರು ಶಿವಣ್ಣ, ತಗಡೂರು ಬಸವರಾಜು, ಕನ್ನಹಳ್ಳಿ ಲಕ್ಷ್ಮಣ, ಕೆಬ್ಬೆ ಮಧು, ಸೋಸಲೆ ಕಾರ್ತಿಕ್, ಉಕ್ಕಲಗೆರೆ ರಾಜು, ಯರಗನಹಳ್ಳಿ ಎಂ.ರಂಗರಾಮು ಇತರರಿದ್ದರು.

ದಸಂಸ ಸಂತಾಪ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಆಘಾತಕಾರಿ ಎಂದು ದಸಂಸ ಜಿಲ್ಲಾ ಸಂಚಾಲಕ ಆಲ್ಗೂಡು ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಕ್ತ ಆರ್ಥಿಕ ನೀತಿ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿ, ಐಟಿ-ಬಿಟಿ ಕ್ರಾಂತಿಗೆ ನಾಂದಿ ಹಾಡಿದ್ದ ಸಿಂಗ್, ಆಹಾರ ಭದ್ರತಾ ಕಾಯ್ದೆ, ಆರ್‌ಟಿಐ, ನರೇಗಾ, ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೆ ತಂದು ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿದರು. ಹಲವಾರು ಜನಪರ, ಜನಪ್ರಿಯ ಯೋಜನೆಗಳನ್ನು ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಸಿಂಗ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.