Zubeen Garg: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಭಾರತದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ(52) ಶುಕ್ರವಾರ ಮೃತಪಟ್ಟಿದ್ದು, ಇದೀಗ ಅವರ ಕೊನೆ ಕ್ಷಣದ ವಿಡಿಯೋ ವೈರಲ್ ಆಗಿದೆ.
ಸೆ.20ರಂದು ನಡೆಯುವ ಈಶಾನ್ಯ ಸಂಗೀತ ಉತ್ಸವದಲ್ಲಿ ತಮ್ಮ ಪ್ರದರ್ಶನ ನೀಡಲು ಜುಬೀನ್ ಗಾರ್ಗ್ ಸಿಂಗಾಪುರದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಸ್ಕೂಬಾ ಡೈವಿಂಗ್ ಅಪಘಾತ ನಡೆದಿದ್ದು, ತಕ್ಷಣ ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದ್ದಾರೆ.
ವೈರಲ್ ವಿಡಿಯೋದಲ್ಲೇದೆ?
ಗಾಯಕ್ ಜುಬೀನ್ ಗಾರ್ಗ ಲೈಫ್ ಜಾಕೆಟ್ ಧರಿಸಿ ನೀರಿಗೆ ಹಾರುವ ದೃಶ್ಯಗಳು ಸೆರೆಯಾಗಿವೆ.ಅಲ್ಲದೆ, ಕೆಲ ಹೊತ್ತು ನೀರಿನಲ್ಲೇ ಈಜುವುದು ಕಾಣಸಿಗುತ್ತದೆ. ಆದರೆ, ಕೆಲ ಹೊತ್ತಿನ ಬಳಿಕ ಉಸಿರಾಟದ ತೊಂದೆರೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಗಾಯಕನ ಕೊನೆ ಕ್ಷಣದ ಈ ದೃಶ್ಯಗಳು ಸೆರೆಯಾಗಿವೆ.
ಪ್ರಧಾನಿ ಮೋದಿ ಸಂತಾಪ
ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ಹಠಾತ್ ನಿಧನದಿಂದ ಆಘಾತವಾಗಿದ್ದು. ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುವುದು, ಅವರ ಗಾಯನಗಳು ಎಲ್ಲಾ ವಯೋಮಾನದ ಜನರಿಂದ ಮೆಚ್ಚುಗೆ ಪಡೆದಿದ್ದವು, ಗಾರ್ಗ್ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)