Singer Sunitha Upadrashta 
ನ್ಯೂಸ್

Singer Sunitha Upadrashta - ನನ್ನ ದೇಹ ನನ್ನಿಷ್ಟ, ಅವನ ಕಣ್ಣು ಅವನಿಷ್ಟ

Singer Sunitha Upadrashta -
ಐಶ್ವರ್ಯಾ ರೈ ಬಚ್ಚನ್​, ಸೌಂದರ್ಯ, ರತಾ, ನಯನತಾರಾ ಸೇರಿ 110 ನಟಿಯರಿಗೆ ಡಬ್​ ಮಾಡಿರುವ, 750ಕ್ಕೂ ಹೆಚ್ಚು ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿರುವ ಹೆಗ್ಗಳಿಕೆ ಗಾಯಕಿ, ಡಬ್ಬಿಂಗ್​ ಕಲಾವಿದೆ ಸುನಿತಾ ಉಪದ್ರಷ್ಟಗೆ ಸಲ್ಲುತ್ತದೆ. ಮೂರು ದಶಕಗಳ ಕರಿಯರ್​ನಲ್ಲಿ ಒಂಬತ್ತು ನಂದಿ ಪ್ರಶಸ್ತಿ ಮತ್ತು ಮೂರು ಫಿಲಂೇರ್​ಗಳನ್ನು ಪಡೆದಿದ್ದಾರೆ. ಹೀಗೆ ತಮ್ಮ ಧ್ವನಿ ಮೂಲಕ ಮನೆ ಮಾತಾಗಿರುವ ಸುನಿತಾಗೆ ಅವರ ಮಾತೇ ಇದೀಗ ಮುಳ್ಳಾಗಿದೆ! ಹೌದು, ಇತ್ತೀಚೆಗಷ್ಟೆ ಫೆಮಿನಿಸಂ ಮತ್ತು ಲಿಂಗ ಸಮಾನತೆ ಕುರಿತು ಮಾತನಾಡುವಾಗ ಅವರು, ಫೆಮಿನಿಸಿಂ ಪ್ರತಿಪಾದಿಸುವವರು ಮೈ ಬಾಡಿ ಮೈ ಚಾಯ್ಸ್​ (ನನ್ನ ದೇಹ ನನ್ನಿಷ್ಟ) ಸ್ಲೋಗನ್​ ಹೇಳುವಂತೆಯೇ ಪುರುಷರು, ಹಿಸ್​ ಐಸ್​ ಹಿಸ್​ ಚಾಯ್ಸ್​ (ಅವನ ಕಣ್ಣು ಅವನಿಷ್ಟ)' ಎಂದಿದ್ದರು. ಜತೆಗೆ, "ಪುರುಷರು ಧೂಮಪಾನ ಮಾಡುತ್ತಾರೆ ಅಂತ ಹೆಣ್ಣುಮಕ್ಕಳೂ ಸಿಗರೇಟ್​ ಸೇದಲು ಪ್ರಾರಂಭಿಸಿದರೆ ಸಮಾನತೆ ಬೆಳೆಯುವುದಿಲ್ಲ' ಎಂದು ನಕಲಿ ಸ್ತ್ರೀವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಅವರ ಈ ಹೇಳಿಕೆಗಳು ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರು, ಸುನಿತಾ ಮಾತನ್ನು ವಿರೋಧಿಸಿದ್ದರು. ಹೀಗಾಗಿ ಈಗ ಗಾಯಕಿ ತಮ್ಮ ಮಾತುಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ನಾನು ಕೋಪ ಮತ್ತು ಹತಾಷೆಯಲ್ಲಿ ಹೇಳಿದ ಮಾತುಗಳು ವೈರಲ್​ ಆಗಿವೆ. ನಾನು ಲಿಂಗ ಸಮಾನತೆ, ಸಮಾನ ಅವಕಾಶ, ಗೌರವ, ಹಕ್ಕುಗಳ ಪರ ಧ್ವನಿ ಎತ್ತಿದ್ದೇನೆಯೇ ಹೊರತು ಮತ್ತೊಬ್ಬ ಮಹಿಳೆಯ ಬಗ್ಗೆ ಅವಹೇಳನ ಮಾಡಿಲ್ಲ' ಎಂದಿದ್ದಾರೆ. ಆದರೆ, ಸದ್ಯ ಸುನಿತಾ ಪರ ಮತ್ತು ವಿರೋಧದ ಚರ್ಚೆಗಳು ಜಾಲತಾಣದಲ್ಲಿ ಮುಂದುವರಿದಿವೆ.