ನ್ಯೂಸ್

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್​ ಕೇಸ್​; ಮಗನ ಕೃತ್ಯ ಗೊತ್ತಿದ್ದರೂ ಮನೆಯವರು ಅದನ್ನು ಮುಚ್ಚಿಟ್ಟಿದ್ದು ನಾಚಿಕೆಗೇಡಿನ ಸಂಗತಿ: ಗಾಯಕಿ ಚಿನ್ಮಯಿ ಶ್ರೀಪಾದ

ಬೆಂಗಳೂರು: ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಪ್ರತಿಕ್ರಿಯಿಸಿದ್ದು, ಮಗನ ಕೃತ್ಯ ಗೊತ್ತಿದ್ದರೂ ಮನೆಯವರು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಿನ್ಮಯಿ, ಅವರ ಕುಟುಂಬಸ್ಥರು ಆತನನ್ನು ಬೆಳೆಸಿದ ರೀತಿಗೆ ಯಾವುದೇ ಹೊಣೆಯನ್ನು ಹೊರುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ಮಗ ಎಸಗುತ್ತಿರುವ ಕೃತ್ಯದ ಬಗ್ಗೆ ತಿಳಿದಿದ್ದರೂ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ನಾಚಿಕೆಗೇಡಿನ ಸಂಗತಿ.

ಚುನಾವಣೆಗೋಸ್ಕರ ರಾಜಕೀಯ ಪಕ್ಷಗಳ ನಾಯಕರು ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಮಹಿಳೆಯರ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರು ಆತ ದೇಶ ಬಿಟ್ಟು ಹೋಗಿರುವುದನ್ನು ನೋಡಿದರೆ ನಾವು ಅರ್ಥಮಾಡಿಕೊಳ್ಳಬೇಕಿದೆ. ಇಷ್ಟಾದರೂ ನಮ್ಮ ಜನ ಇಂತಹವರನ್ನ ಆಯ್ಕೆ ಮಾಡಿ ಕಳುಹಿಸುತ್ತಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಕಿಡಿಕಾರಿದ್ದಾರೆ.