Armaan Malik Is Now Married: ಗಾಯಕ ಅರ್ಮಾನ್ ಮಲಿಕ್ ಗೆಳತಿ ಆಶ್ನಾ ಶ್ರಾಫ್ ಅವರನ್ನು ವಿವಾಹವಾದರು. ದಂಪತಿ ತಮ್ಮ ವಿವಾಹವನ್ನು ಘೋಷಿಸಲು ಜಂಟಿ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆಶ್ನಾ ಶ್ರಾಫ್ ಅವರ ಜೊತೆಗೆ ಗಾಯಕ ಆಗಸ್ಟ್ 28ರಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದು, ತೂ ಹೀ ಮೇರಾ ಘರ್ (ನೀನೇ ನನ್ನ ಮನೆ) ಎಂದು ಬರೆದುಕೊಂಡಿದ್ದಾರೆ.
ಆಶ್ನಾ ಶ್ರಾಫ್ ಜನಪ್ರಿಯ ಪ್ಯಾಷನ್ ಡಿಸೈನರ್, ಮಾಡೆಲ್ ಮಾತ್ರವಲ್ಲ ಬ್ಯೂಟಿ ಬ್ಲಾಗರ್ ಮತ್ತು ಯೂಟ್ಯೂಬರ್ ಕೂಡ ಹೌದು. 2023 ರ ವರ್ಷದ ಕಾಸ್ಮೋಪಾಲಿಟನ್ ಐಷಾರಾಮಿ ಫ್ಯಾಷನ್ ಪ್ರಭಾವಿ ಎಂದು ಗುರುತಿಸಲ್ಪಟ್ಟಿದ್ದಾರೆ.ಆಶ್ನಾ ಕಿತ್ತಳೆ ಬಣ್ಣದ ಲೆಹೆಂಗಾದಲ್ಲಿ ಅತ್ಯಂತ ಸುಂದರವಾಗಿ ಕಾಣಸಿದರೆ ಅರ್ಮಾನ್ ತಿಳಿ ಬಣ್ಣದ ಶೆರ್ವಾನಿ ಸೂಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವೇ ಹರಿಸಿದ್ದಾರೆ.
ಕನ್ನಡಲ್ಲಿ ಮುಂಗಾರು ಮಳೆ 2 ಚಿತ್ರದ ಸರಿಯಾಗಿ ನೆನಪಿದೆ ನನಗೆ, ಚಕ್ರವರ್ತಿ ಸಿನೆಮಾದ ಒಂದು ಮಳೆಬಿಲ್ಲು ಒಂದು ಮಳೆ ಮೋಡ, ಎಕ್ ಲವ್ ಯಾ ಚಿತ್ರದ ಯಾರೇ ಯಾರೇ ಸಾಂಗ್ ಸೇರಿದಂತೆ ಕನ್ನಡದ 50ಕ್ಕೂ ಹೆಚ್ಚು ಹಾಡುಗಳಿಗೆ ಅರ್ಮಾನ್ ದನಿಯಾಗಿದ್ದು, ಹಿಂದಿ, ತೆಲುಗು, ಇಂಗ್ಲಿಷ್, ಬೆಂಗಾಲಿ, ಕನ್ನಡ, ಮರಾಠಿ, ತಮಿಳು, ಗುಜರಾತಿ, ಪಂಜಾಬಿ, ಉರ್ದು ಮತ್ತು ಮಲಯಾಳಂ ಮುಂತಾದ ಭಾಷೆಗಳಲ್ಲಿ ಹಾಡಿ ಜನಪ್ರಿಯರಾಗಿದ್ದಾರೆ.