ಅರಟಾಳ ಸಮೀಪದ ಬಾಡಗಿ ಗ್ರಾಮದಲ್ಲಿ ಹನುಮಾನ ದೇವರ ಓಕುಳಿ ಕಂಬ ನಡೆಲಾಯಿತು. ಗ್ರಾಪಂ ಸದಸ್ಯರಾದ ಶಿವಾನಂದ ನೇಮಗೌಡ, ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ಬಿ.ಆರ್.ಡಂಗಿ ಇತರರಿದ್ದರು. 
ನ್ಯೂಸ್

ಭಾವೈಕ್ಯದಿಂದ ಆಚರಿಸಲಿ

ಅರಟಾಳ: ಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹನುಮಂತ ದೇವರಲ್ಲಿದೆ ಎಂದು ಗ್ರಾಪಂ ಸದಸ್ಯ ಶಿವಾನಂದ ನೇಮಗೌಡ ಹೇಳಿದರು.
ಸಮೀಪದ ಬಾಡಗಿ ಗ್ರಾಮದಲ್ಲಿ ಗುರುವಾರ ಹನುಮಾನ ದೇವರ ಓಕುಳಿ ಕಂಬ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಭಾವೈಕ್ಯತೆಯಿಂದ ಎಲ್ಲರೂ ಪಾಲ್ಗೊಂಡು ಜಾತ್ರೆ ಯಶಸ್ಸಿಗೆ ಶ್ರಮಿಸಬೇಕು ಎಂದರು.

ಬಳಿಕ ದರೇಪ್ಪ ಚಿಕ್ಕೋಡಿ ಅವರು ಅವಲಕ್ಕಿ ಪ್ರಸಾದ ವಿತರಿಸಿದರು. ಗ್ರಾಪಂ ಸದಸ್ಯ ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ಬಿ.ಆರ್.ಡಂಗಿ, ಸತ್ಯಪ್ಪ ಬಿರಾದಾರ, ಸಾಬು ತೇಲಿ, ಮನೋಹರ ಜಂಬಗಿ, ಯಲ್ಲಪ್ಪ ಪಡಸಲಗಿ, ರಾವಸಾಬ ಬಿರಾದಾರ, ಭೀಮಪ್ಪ ಚಮಕೇರಿ, ರಾಮಚಂದ್ರ ಬಿಜ್ಜರಗಿ, ರೇವಪ್ಪ ತೇಲಿ, ಚನ್ನಪ್ಪ ಕಾಗವಾಡ, ಪರಶು ಬಿರಾದಾರ, ಹನುಮಂತ ಪಡಸಲಗಿ, ಸುನೀಲ ತೇಲಿ ಇದ್ದರು.