ಗಾಂಧಿ ಜಯಂತಿ ಅಂಗವಾಗಿ ಶಿಕಾರಿಪುರದ ಕುಮುದ್ವತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು. 
ನ್ಯೂಸ್

ಸರಳ ಜೀವನ ಮೂಲಮಂತ್ರ

ಸೋಮಶೇಖರ ಎನ್

ಶಿಕಾರಿಪುರ: ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಕಳಕಳಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಗಾಂಧೀಜಿ ಮಹಾತ್ಮರು ಎಂದು ಕುಮುದ್ವತಿ ಕಾಲೇಜಿನ ಪ್ರಾಚಾರ್ಯ ಡಾ. ವೀರೇಂದ್ರ ಹೇಳಿದರು.

ಗಾಂಧೀಜಿ, ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ಕುಮುದ್ವತಿ ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಮಾತನಾಡಿ, ವಿದ್ಯಾರ್ಥಿಗಳು ಮಹಾತ್ಮ ಗಾಂಧಿ, ಲಾಲ್ ಬಹದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಶಿವರಾಜ್, ಇಡೀ ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧಿ. ಪ್ರಾಮಾಣಿಕತೆ ಮತ್ತು ಸತ್ಯದ ದಾರಿಯಲ್ಲಿ ನಡೆದವರು ಎಂದು ಬಣ್ಣಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಚಂದ್ರಶೇಖರ್, ಉಪನ್ಯಾಸಕಿ ನಳಿನಾ ಪಾಟೀಲ್, ವಿದ್ಯಾರ್ಥಿಗಳು ಇದ್ದರು.