ನ್ಯೂಸ್

ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸುವ ಸರಳ ಆಹಾರಗಳು! Fat loss foods

Fat loss foods: ಇಂದಿನ ದಿನಗಳಲ್ಲಿ ದೇಹದಲ್ಲಿರುವ ಅತಿಯಾದ ಕೊಬ್ಬನ್ನು ಕರಗಿಸುವುದು ತುಂಬಾ ಗಂಭೀರವಾದ ಸಮಸ್ಯೆ. ಆದರಿಂದ ಹಲವಾರು ಜನರು ಅನೇಕ ರೀತಿಯ ಔಷಧಿಗಳು, ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ರೀತಿಯ ಬೆಳವಣಿಗೆಗಳು ಅವರ ದೇಹದಲ್ಲಿ ಕಂಡುಬರುವುದಿಲ್ಲ. ಇದರಿಂದ ಚಿಂತೆಗೆ ಮಗ್ನರಾಗಿರುತ್ತಾರೆ. ಹಾಗಾಗಿ ನೀವೇನಾದರೂ ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸಿದರೆ, ಈ ಆಹಾರಗಳನ್ನು ಸೇವಿಸಿರಿ. ಗಣನೀಯವಾಗಿ ಬೊಜ್ಜನ್ನು ಕರಗಿಸಿಕೊಳ್ಳಿ..

1. ಶುಂಠಿ ಮತ್ತು ನಿಂಬೆ ಚಹಾ

ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಸುಡುವ ಪಾನೀಯ ಇದಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಕೊಬ್ಬಿನ ಕೋಶಗಳನ್ನು ವಿಘಟಿಸುವಂತೆ ಮಾಡುತ್ತದೆ. ಆದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುವುದು ಬಹಳ ಪ್ರಯೋಜನಕಾರಿ ಎಂದು ತಿಳಿದುಬಂದಿದೆ.

ಬೇಕಾಗುವ ಪದಾರ್ಥಗಳು

* 1 ಚೂರು ಹಸಿ ಶುಂಠಿ

* 1 ಚಮಚ ನಿಂಬೆ ರಸ

* ½ ಚಮಚ ಜೇನುತುಪ್ಪ

* 1 ಕಪ್ ನೀರು

ಮಾಡುವ ವಿಧಾನ

ಮೊದಲು ಒಂದು ಲೋಟವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿರಿ. ಅದಕ್ಕೆ ಚೂರು ಮಾಡಿದ ಶುಂಠಿಯನ್ನು ಸೇರಿಸಿ 5-10 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಅದನ್ನು ಕೆಳಗೆ ಇಳಿಸಿ, ನಿಂಬೆ ರಸ ಮತ್ತು ಜೇನು ಸೇರಿಸಿ ಮಿಕ್ಸ್​​ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ತೆಗೆಯುವಂತೆ ಮಾಡುತ್ತದೆ.

2. ಜೀರಿಗೆ ನೀರು

ಜೀರಿಗೆ ನೀರು ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಒಂದು ಪಾನೀಯವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯಲ್ಲಿ ನೀರು ಶೇಖರಣೆಯಾಗುವುದನ್ನು ತಡೆಯುತ್ತದೆ.

ಬೇಕಾಗುವ ಪದಾರ್ಥಗಳು

* 1 ಚಮಚ ಜೀರಿಗೆ

* 1 ಕಪ್ ನೀರು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಅದಕಕೆ ಜೀರಿಗೆ ಸೇರಿಸಿ 8-10 ನಿಮಿಷ ಕುದಿಸಿರಿ. ನಂತರ ಸೋಸಿ ಈ ನೀರನ್ನು ಪ್ರತಿನಿತ್ಯ ಬೆಳಿಗ್ಗೆ ಎದ್ದ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

3. ರಾಗಿ ಮೊಳಕೆ ಸಲಾಡ್

ರಾಗಿಯು ವಿಟಮಿನ್ ಡಿ ಹೊಂದಿರುವ ಆಹಾರ ಪದಾರ್ಥವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಹೊರಹಾಕುತ್ತದೆ. ಹಾಗಾಗಿ ಈ ಸಲಾಡ್​ನ್ನು ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಲು ಸಹಾಯವಾಗಬಹುದು.

ಬೇಕಾಗುವ ಪದಾರ್ಥಗಳು

* 1 ಕಪ್ ಮೊಳಕೆ ಕಟ್ಟಿಸಿದ ರಾಗಿ ಕಾಳು

* 1 ಹಸಿರು ಮೆಣಸು

* 2 ಚಮಚ ರುಬ್ಬಿದ ಕೊಬ್ಬರಿ ಚೂರು

* 1 ಚಮಚ ನಿಂಬೆ ರಸ

* ಉಪ್ಪು ಮತ್ತು ಜೀರಿಗೆ ಪೌಡರ್

ಮಾಡುವ ವಿಧಾನ

ರಾಗಿಯನ್ನು ಒಂದು ದಿನ ನೆನಸಿಟ್ಟು ಮೊಳಕೆ ಮಾಡಿಕೊಳ್ಳಿ. ನಂತರ ರಾಗಿ ರವವನ್ನು ಬೇಯಿಸಿರಿ. ಎಲ್ಲವನ್ನೂ ಒಂದು ಬೌಲ್​ಗೆ ಹಾಕಿ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ನಿಂಬೆ ರಸ, ಜೀರಿಗೆ ಸೇರಿಸಿ ಮಿಕ್ಸ್​ ಮಾಡಿ ಸೇವಿಸಿರಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.