ಕಡೂರು: ಜಿಲ್ಲೆಯಲ್ಲಿ ಪ್ರಥಮ ಮೃತ್ತಿಕಾ ಬೃಂದಾವನ ಎಂಬ ಹೆಗ್ಗಳಿಕೆ ಹೊಂದಿರುವ ಪಟ್ಟಣದ ಕೋಟೆಯಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ ಗುರುವಾರ ಆರಂಭವಾಯಿತು.
ಪೂರ್ವಾರಾಧನೆ ಪ್ರಯುಕ್ತ ಪ್ರಧಾನ ಅರ್ಚಕ ಅಶ್ವತ್ಥ್‌ನಾರಾಯಣ ಆಚಾರ್ಯ ಅವರಿಂದ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಗ್ಗೆ ರಾಯರ ಬೃಂದಾವನದಲ್ಲಿ ಅಭಿಷೇಕ, ಅಷ್ಟಾವಧಾನ ಸೇವೆ ಸೇರಿ ರಜತ ಕವಚದ ಹೂವಿನ ಅಲಂಕಾರ ನೆರವೇರಿಸಲಾಯಿತು.
ಮಠದ ಸಮಿತಿ ಅಧ್ಯಕ್ಷ ಎಚ್.ಜೆ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಟಿ.ಆರ್.ಮಧು, ಟಿ.ಆರ್.ಪವನ್, ಕೃಷ್ಣಮೂರ್ತಿ ಜೋಷಿ, ಪ್ರದೀಪ್ ಓಂಕಾರ್, ವೆಂಕಟೇಶ್ ಪದಕಿ, ಮಂಜುನಾಥ್ ಗೋಟಾ, ಅರ್ಚಕ ನಾಗರಾಜ್ ಆಚಾರ್ ಇದ್ದರು.