ನ್ಯೂಸ್

ಸಿದ್ದರಾಮಯ್ಯ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯಲು ವ್ಯವಸ್ಥಿತ ಷಡ್ಯಂತ್ರ: ಕಾಂಗ್ರೆಸ್ ನಾಯಕರ ವಾಗ್ದಾಳಿ

Bengaluru - Political - Shivananda Tagadur

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದಲೇ ರಾಜ್ಯಪಾಲರು ನೋಟೀಸ್ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ, ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅನೇಕ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ.ಅದರಲ್ಲಿ ಕೆಲವು ರಾಜ್ಯಗಳಲ್ಲಿ ಯಶಸ್ಸು ಆಗಿದ್ದಾರೆ. ಅದರ ಹವ್ಯಾಸದ ಪರಿಪಾಠವೇ ಕರ್ನಾಟಕದಲ್ಲಿ ಮಾಡುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯವನ್ನ ಟಾರ್ಗೆಟ್ ಮಾಡುವ ಮೂಲಕ ಅವರ ಕ್ರೆಡಿಯಬಲಿಟಿ ಹಾಳು ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಿಗೆ ಸಂಬಂಧನೇ ಇಲ್ಲದ ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ಕೇಳುತ್ತಿರುವುದು ಅಚ್ಚರಿಯಾಗಿದೆ. ಕಾನೂನಾತ್ಮಕ ಅಂಶಗಳು ಸಾಕಷ್ಟಿವೆ. ಇಲ್ಲಿಯವರೆಗೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ, ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಆದರೂ ಅವರನ್ನ ಗುರಿಯಾಗಿಸಿ ಪ್ರಾಸಿಕ್ಯೂಸನ್ ಮಾಡಿಸುವ ಯತ್ನ ನಡೆಸಿದ್ದಾರೆ ಎಂದು ದೂರಿದರು.
ಗಾಜಿನ ಮನೆಯಲ್ಲಿ ಇರುವವರು ಕಲ್ಲು ಹೊಡೆಯಬಾರದು. ಅವರು ಗಾಜಿನ ಮನೆಯಲ್ಲಿ ನಿಂತು ಹೊಡೆಯುತ್ತಿದ್ದಾರೆ ಎನ್ನುವುದನ್ನೆ ಮರೆತಿದ್ದಾರೆ. ಬಿಜೆಪಿಯಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಬಿಜೆಪಿ ಉದ್ದೇಶ ಈಡೇರುವುದಿಲ್ಲ ಎಂದರು.
ಸಿದ್ದರಾಮಯ್ಯ ಟಾರ್ಗೆಟ್ ಮಾಡುವ ಮೂಲಕ ಕಾಂಗ್ರೆಸ್ ನ ದುರ್ಬಲ ಮಾಡಲು ಸಾಧ್ಯವಿಲ್ಲ. ಸಿಎಂ ಪರವಾಗಿ ಶಾಸಕರು, ಸಚಿವರು ನಿಂತಿದ್ದಾರೆ. ಅವರ ನಾಯಕತ್ವಕ್ಕೆ ಭಂಗ ಬರುವುದಿಲ್ಲ ಎಂದರು.