ತುಮಕೂರಿನಲ್ಲಿ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸರ್ವಸದಸ್ಯರ ಸಭೆ ನಡೆಯಿತು. ಮಾರುತಿರಾವ್ ಮಾಲೆ, ಡಾ.ಜಿ.ಪರಮೇಶ್ವರ, ತಿಪ್ಪೆಸ್ವಾಮಿ, ದಯಾನಂದ್, ಈಶ್ವರಪ್ಪ ಮತ್ತಿತರರು ಇದ್ದರು. 
ನ್ಯೂಸ್

ತಾಷ್ಕೆಂಟ್‌ನಲ್ಲಿ ಸಿದ್ಧಾರ್ಥ ಸಂಸ್ಥೆ; ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಹೇಳಿಕೆ

ತುಮಕೂರು: ರೈತನಂತೆಯೇ ಲಾಭವಾಗಲಿ, ನಷ್ಟವಾಗಲಿ ಗ್ರಾಮಾಂತರ ಪ್ರದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯ ಗುರಿ ಎಂದು ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಸಿದ್ಧಾರ್ಥನಗರದ ಸಿದ್ಧಾರ್ಥ ಶಿಕ್ಷಕರ ತರಬೇತಿ ಕೇಂದ್ರದ ಸಂಭಾಗಣದಲ್ಲಿ ಭಾನುವಾರ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಶೈಕ್ಷಣಿವಾಗಿ ಸಂಸ್ಥೆಯನ್ನು ಸಾಗರದಾಚೆಗೂ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದರು.

ಸ್ವಾತಂತ್ರ್ಯ ಗಳಿಸಿದ ನಂತರದ ದಿನಮಾನಗಳಲ್ಲಿ ದೇಶದ ಶಿಕ್ಷಣ ಸುಧಾರಣೆಯ ಬದಲಾವಣೆಗಳಾದವು. ದೇಶದ ಅಭಿವೃದ್ಧಿಗೆ ದೂರದರ್ಶಿತ್ವದ ನೀತಿಗಳು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ದೇಶದ ಶಿಕ್ಷಣ ನೀತಿಗಳು ಸಹಕಾರಿಯಾದ್ದರಿಂದಲೇ ಇಂದು ತಾಂತ್ರಿಕ ಮಾನವಸಂಪನ್ಮೂಲಗಳನ್ನು ಇಡೀ ಪ್ರಪಂಚಕ್ಕೆ ಪೂರೈಕೆ ಮಾಡುವಲ್ಲಿ ಭಾರತ ಮೊದಲ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದರು.

ಡಾ.ಎಚ್.ಎಂ.ಗಂಗಾಧರಯ್ಯ ಅವರ ಆಶಯದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಾದ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದರು.

ರೈತ ತನಗೆ ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ಜಗತ್ತಿಗೆಲ್ಲ ಅನ್ನ ನೀಡುತ್ತಾನೆ. ಹಾಗೇಯೇ ಲಾಭವಾಗಲಿ, ನಷ್ಟವಾಗಲಿ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು.

ಉಜ್ಬೇಕಿಸ್ತಾನ್ ದೇಶದ ತಾಷ್ಕೆಂಟ್‌ನಲ್ಲಿ ಕೂಡ ತಾಂತ್ರಿಕ ಮಹಾವಿದ್ಯಾಲಯ ತೆರೆಯಲು ಪ್ರಕ್ರಿಯೆಗಳು ನಡೆದಿವೆ. ಮುಂಬರುವ ದಿನಗಳಲ್ಲಿ ಶೈಕ್ಷಣಿವಾಗಿ ಸಂಸ್ಥೆಯನ್ನು ಸಾಗರದಾಚೆಗೂ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ಡಾ.ಜಿ.ಪರಮೇಶ್ವರ ವಿವರಿಸಿದರು.

ಸಂಸ್ಥೆ ಅಧ್ಯಕ್ಷ ಮಾರುತಿರಾವ್ ಮಾಲೆ, ಸದಸ್ಯರಾದೆಚ್.ಅಮರನಾಥ, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರ ವಿವೇಕ ವೀರಯ್ಯ, ದಂತ ವೈದ್ಯಕಿಯ ಕಾಲೇಜು ಪ್ರಾಚಾರ್ಯ ಡಾ.ಪ್ರವೀಣ್ ಕುಡುವ, ಎಸ್‌ಎಸ್‌ಐಟಿ ಪ್ರಾಚಾಯ ಡಾ.ಎಂ.ಎಸ್.ರವಿಪ್ರಕಾಶ್, ಮುಖ್ಯ ಲೆಕ್ಕಾಧಿಕಾರಿ ಸತೀಶ್‌ಚಂದ್ರ, ಹರಿಕಥಾ ವಿದ್ವಾನ ಡಾ. ಲಕ್ಷಣ್‌ದಾಸ್ ಇದ್ದರು.

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಶಾಲೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಅದೇ ರೀತಿ ರಾಜ್ಯದಲ್ಲಿರುವ 89 ಶಾಲಾ-ಕಾಲೇಜುಗಳಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಸ್ಥಳಿಯವಾಗಿ ಸಂಪನ್ಮೂಲಗಳ ಬಳಸಿಕೊಳ್ಳುವುದರ ಜತೆಗೆ ಸಂಸ್ಥೆ ಕೈಜೊಡಿಸಲಿದೆ. ಡಾ.ಜಿ.ಪರಮೇಶ್ವರ ಸಿದ್ಧಾರ್ಥ ಸಂಸ್ಥೆ ಕಾರ್ಯದರ್ಶಿ