ಬೆಂಗಳೂರು: ಬೆಂಗಳೂರಿನಲ್ಲಿ ಯುವ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಂಬಂಧಿ ಸಿದ್ದಾರ್ಥ ದೇವೇಂದರ್ ಸಿಂಗ್(28) ಕಾಣೆಯಾದವರು. ಜ.19ರ ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಾಗೆ ಹೋಗುತ್ತಿರುವುದಾಗಿ ತಂದೆಗೆ ಸಿದ್ದಾರ್ಥ ದೇವೇಂದರ್ ಸಿಂಗ್ ಮೊಬೈಲ್ನಿಂದ ವಾಟ್ಸ್ಆ್ಯಪ್ ಮೆಸೇಜ್ ಬಂದಿದೆ. ಬಳಿಕ ಸಿದ್ದಾರ್ಥ್ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಸಿದ್ದಾರ್ಥ್ ಇತ್ತ ಅಮೆರಿಕಾಗೂ ಹೋಗಿಲ್ಲ, ಅತ್ತ ಮೊಬೈಲ್ ಫೋನ್ ಕೂಡ ಕನೆಕ್ಟ್ ಆಗಿಲ್ಲ. ಇದನ್ನೂ ಓದಿರಿ ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ
ಮಗನಿಗಾಗಿ ಹುಡಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ತಂದೆ ದೇವೇಂದರ್ ಸಿಂಗ್ ಅವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದಾರೆ.
ಈ ನಡುವೆ ನೆಲ್ಲೂರು ಕಾಡಿನಲ್ಲಿ ಅಪರಿಚ ಶವ ಪತ್ತೆಯಾಗಿದ್ದು, ಈ ಬಗ್ಗೆ ನೆಲ್ಲೂರು ಪೊಲೀಸರ ಮಾಹಿತಿ ಆಧರಿಸಿ ಅಮೃತಹಳ್ಳಿ ಪೊಲೀಸರ ತಂಡ ಆಂಧ್ರದ ನೆಲ್ಲೂರಿನ ಅರಣ್ಯ ಪ್ರದೇಶಕ್ಕೆ ಇಂದು(ಭಾನುವಾರ) ಭೇಟಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಡಿನಲ್ಲಿ ದುಷ್ಕರ್ಮಿಗಳು ಹೂತು ಹಾಕಿರುವ ಶವವನ್ನು ಹೊರತೆಗೆದ ಬಳಿಕವಷ್ಟೇ ಅದು ಯಾರದ್ದು? ಎಂಬುದು ಗೊತ್ತಾಗಲಿದೆ. (ದಿಗ್ವಿಜಯ ನ್ಯೂಸ್)