ನ್ಯೂಸ್

ಎಂಇಎಸ್​ ಬಾಲ ಬಿಚ್ಚೋಕೆ ಬಿಡಬಾರದು: ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

mahalakshmihm

ವಿಜಯಪುರ: ಎಂಇಎಸ್​ ನವರ ಪುಂಡಾಟಿಕೆಯನ್ನು ಹತ್ತಿಕ್ಕಬೇಕು ಅವರನ್ನು ಸುಮ್ಮನೆ ಬಿಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ವಿವಾದ ವಿಚಾರ ಮಹಾಜನ್ ವರದಿಯಲ್ಲಿ‌ ಯಾವ್ಯಾವ ಪ್ರದೇಶಗಳು ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಇತ್ಯರ್ಥವಾಗಿದೆ.ಈಗ ರಾಜಕಾರಣಕ್ಕಾಗಿ ಕ್ಯಾತೆ ತೆಗೆಯುತ್ತಾರೆ, ಇದನ್ನೆಲ್ಲ ಸರ್ಕಾರ ಹತ್ತಿಕ್ಕಬೇಕು ಎಂದು ಹೇಳಿದರು.

ಬೆಳಗಾವಿ, ನಿಪ್ಪಾಣಿ, ಕಾರವಾರ ಬೀದರ್ ಬಾಲ್ಕಿ ಸಹಿತ ‌ನೂತನ‌ ನಕ್ಷೆ ತಯಾರಿಸಿ ಉದ್ಧಟತನ ಮೆರೆದ ಎಂಇಎಸ್ ಕುರಿತು ಮಾತನಾಡಿ, ಎಂಇಎಸ್ ಪುಂಡರ ಮೇಲಿನ‌ ಮೊಕದ್ದಮೆಗಳನ್ನು ಸರ್ಕಾರ ವಾಪಸ್ ತೆಗೆದುಕೊಂಡ‌ ಬಳಿಕ ಈ ವರ್ತನೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರ ಎಂಇಎಸ್​​ನವರ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪಕ್ಷಾಂತರ ಮಾಡಿ ತಪ್ಪು ಮಾಡಿದವು ಎಂದು ಸಚಿವ ಎಂ ಟಿ ಬಿ ನಾಗರಾಜ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಅವರಿಗೆ ಮಾಡಿದ ಪಾಪದ ಕೆಲಸ  ಈಗ ಅರಿವಾಗಿದೆ ಅಷ್ಟೇ ಎಂದರು.