ನ್ಯೂಸ್

ನನ್ನ 35 ವರ್ಷ ರಾಜಕೀಯದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲ: ಸಿಎಂ ಸಿದ್ದರಾಮಯ್ಯ

Bengaluru - Political - Shivananda Tagadur

ಬೆಂಗಳೂರು:

ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈಗ ನನಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮೇಲ್ಮನೆಯಲ್ಲಿ ತಿಳಿಸಿದರು.

ನಿವೇಶನ ಕೊಡಿ ಎಂದು ನಾನು ಕೇಳಿಲ್ಲ. ಬಿಜೆಪಿ ಅವಧಿಯಲ್ಲೆ ಆ ನಿವೇಶನ ಕೊಟ್ಟಿದ್ದಾರೆ. ಆದರೂ ಈಗ ಸಮಸ್ಯೆ ಅಲ್ಲದ್ದನ್ನೆ ಇವರು ಸಮಸ್ಯೆ(ಇಶ್ಯೂ) ಮಾಡಿದ್ದಾರೆ ಎಂದರು.

ವೈಯಕ್ತಿಕವಾಗಿ ಈ ವಿಚಾರ ತೆಗೆದುಕೊಂಡು ಮಾತನಾಡುತ್ತಿದ್ದಾರೆ. 2021 ನೇ ಇಸವಿಯಿಲ್ಲ ಸೈಟ್ ಕೊಟ್ಟಿರೊದು. ಆ ಕಾಲದಲ್ಲಿ ಯಾರು ಅಧಿಕಾರದಲ್ಲಿದ್ದರೊ? ನೀವೇ ತಾನೇ? ಎಂದು ಸದನದಲ್ಲಿ ಬಿಜೆಪಿ ಕಡೆಗೆ ಬೊಟ್ಟು ಮಾಡಿದರು.

ಬಿಜೆಪಿಯ ರಾಜೀವ್ ಆ ಕಾಲದಲ್ಲಿ ಅಧ್ಯಕ್ಷರಾಗಿದ್ದರು. ಆಗಲೇ ಮುಡಾದವರು ಸಭೆಯ ನಿರ್ಣಯ ಮಾಡಿದಂತೆ ಮಾಡಿಕೊಟ್ಟಿದ್ದಾರೆ. ಈಗ ಇದು ಸಬ್ ಜ್ಯುಡೀಸ್ ಆಗುತ್ತೆ. ಹೀಗಾಗಿ ಚರ್ಚೆಗೆ ಅವಕಾಶ ನೀಡಬಾರದು. ಇದು ಕೆಟ್ಟ ಸಂಪ್ರದಾಯ ಆಗಲಿದೆ ಎಂದರು.

ಮುಡಾದವರು ನಮ್ಮ ಜಮೀನು ತೆಗೆದುಕೊಂಡು ಬಡಾವಣೆ ಮಾಡಿ ನಿವೇಶನ ಹಂಚಿದ್ದಾರೆ. ಹಿಂದೆ ಲ್ಯಾಂಡು ಟು ಲ್ಯಾಂಡ್ ಕೊಟ್ಟಿದ್ದಾರೆ. ಆದರೆ ನಾವು ಲ್ಯಾಂಡ್ ಟು ಲ್ಯಾಂಡ್ ಕೇಳಿಲ್ಲ. ಅವರೇ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದಾರೆ ಎಂದರು.

ಈ ನಡುವೆ ಪ್ರತಿಭಟನೆ ತೀವ್ರಗೊಳಿಸಿದ ಬಿಜೆಪಿ ಭ್ರಷ್ಟಾಚಾರದ ಮೂಲ ಯಾರು, ಭ್ರಷ್ಟಾಚಾರದ ಪಿತಾಮಹ ಯಾರು ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.

ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಭ್ರಷ್ಟಾಚಾರದ ಮೂಲ, ಭ್ರಷ್ಟಾಚಾರದ ಪಿತಾಮಹ ಯಾರು ಅಂದರೆ, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಎಂದು ಕೌಂಟರ್ ಕೊಟ್ಟರು.