ಬೆಂಗಳೂರು: ಹುಟ್ಟು ಹಲವು ನೋವುಗಳಿಂದ ಬಳಲುತ್ತಿರುವ ಆರು ತಿಂಗಳ ಮೇಘಶ್ರೀ ಎಂಬ ಪುಟ್ಟ ಕಂದಮ್ಮಳಿಗೆ ಈಗಾಗಲೇ ಮೂರು ಶಸ್ತ್ರ ಚಿಕಿತ್ಸೆಗಳಾಗಿವೆ. ವೈದ್ಯರ ಸಲಹೆ ಮೇರೆಗೆ ಹೃದಯ ರಂಧ್ರ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ ಎಂದು ಗದಗ ಜಿಲ್ಲೆಯ ಅಂಜಲಿ ಕುಂಬಾರ ನಿವೇದಿಸಿಕೊಂಡು, ನೆರವಿಗಾಗಿ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡರು.
ಆರು ತಿಂಗಳ ಮಗು ಮೇಘಾಶ್ರೀ ಎರಡು ಕಾಲುಗಳ ಅಂಗವೈಕಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯದಲ್ಲಿ ರಂಧ್ರ ಇದ್ದು ಚಿಕಿತ್ಸೆಯ ನೆರವಿಗೆ ಸಿಎಂ ಸ್ಪಂದಿಸಿ, ಸ್ಥಳದಲ್ಲೇ 2 ಲಕ್ಷ ರೂ. ಮಂಜೂರು ಮಾಡಿದರು.
ನಮ್ಮಪ್ಪ ಮೊದ್ಕ ಐದ ವರ್ಷ ಒಳ್ಳೇ ಆಡಳಿತ ಕೊಟ್ಟಿ. ಮತ್ತೆ ಮುಖ್ಯಮಂತ್ರಿಯಾಗಿ ಜನಪರ, ಬಡವರ ಪರ ಕಾರ್ಯಕ್ರಮ ಕೊಟ್ಟಿದ್ದೀರಿ. ನಮ್ಮಪ್ಪನೇ ನೀನೇ 2028ಕ್ಕೂ ದೇಶ ಆಳಬೇಕು. ನಿನ್ನ ಬಿಟ್ಟರೆ ಯಾರೂ ಇಲ್ಲವೆಂಬ ವಿಶೇಷ ಅಹವಾಲು ಸಲ್ಲಿಕೆಯಾಯಿತು. ಸಿಎಂ ಸಿದ್ದರಾಮಯ್ಯ ಕೇಳಿಸಿಕೊಂಡು ಆಯ್ತಪ್ಪಾ ನಡಿ ಎಂದು ಸಾಗ ಹಾಕಿದರು.
ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನಕಾಂಗ್ರೆಸ್ ಕಾರ್ಯಕರ್ತ ಲಿಂಗಯ್ಯ ಈ ಮನವಿ ಸಲ್ಲಿಸುತ್ತಾ ತನ್ನ ಕೋರಿಕೆಯನ್ನು ಸಿಎಂ ಮುಂದಿಟ್ಟರು. ಎಡಗೈಸಮುದಾಯಕ್ಕೆ ಸೇರಿದ್ದು, 35 ವರ್ಷಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿರುವೆ. ನನ್ನ ಅಳಿಯ ಶಿವಣ್ಣನಿಗೆ
ಮೈಸೂರು ಜಿಲ್ಲೆಯ ಯಾವುದಾದರೊಂದು ಸಮಿತಿಗೆ ನೇಮಕ ಮಾಡಬೇಕು ಎಂಬ ಬೇಡಿಕೆಯಿಟ್ಟರು.