ಸಿದ್ದರಾಮಯ್ಯ  
ನ್ಯೂಸ್

ಗ್ಯಾರೆಂಟಿ ನಿಲ್ಲಿಸಿ ಎಂದು ಯಾವ ಶಾಸಕ ಹೇಳಿದ್ದಾರೆ?

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಗ್ಯಾರೆಂಟಿ ನಿಲ್ಲಿಸಿ ಎಂದು ಯಾವ ಶಾಸಕ ಹೇಳಿದ್ದಾರೆ, ಯಾರೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಮೇಲೆ ಮುಗಿಬಿದ್ದ ಪ್ರಸಂಗ ನಡೆಯಿತು.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಗ್ಯಾರೆಂಟಿ ನಿಲ್ಲಿಸಿ ಎಂದು ಕಾಂಗ್ರೆಸ್‌ನ ಹಲವು ಶಾಸಕರು ಒತ್ತಡ ಹೇರುತ್ತಿದ್ದಾರೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಯಾವ ಶಾಸಕರೂ ಹಾಗೆ ಹೇಳಿಲ್ಲ ಎಂದು ಏರಿದ ದನಿಯಲ್ಲಿ ಹೇಳಿದರು. ಜತೆಗೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಮತ ಹೆಚ್ಚಾಗಿದೆ. ಒಂದು ಸೀಟಿನಿಂದ ಒಂಬತ್ತು ಸೀಟು ಆಯಿತು. ಸೋತವರು ನಾವೋ ಅವರೋ? ಎಂದು ಪ್ರಶ್ನಿಸಿದರಲ್ಲದೇ, ಪತ್ರಕರ್ತರು ವಿಶ್ಲೇಷಣೆ ಮಾಡಲ್ಲ. ಮೈತ್ರಿಯಿಂದ ಕಾರಣಕ್ಕೆ ಕೆಲವು ಅವರ ಸಂಖ್ಯೆ ಹೆಚ್ಚಾಗಿದೆ ಅಷ್ಟೇ ಎಂದರು.