ನ್ಯೂಸ್

ನಿಂಬೆಹಣ್ಣು ಬದಲು ಕೊಬ್ಬರಿ ಹಿಡಿದು ಬಂದ ರೇವಣ್ಣ; ಯಾವಗಲೂ ನಿಂಬೆಹಣ್ಣು ತರ್ತಾ ಇದ್ದೆ.. ಎಂದು ಹಾಸ್ಯ ಚಟಾಕಿ ಹಾರಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ರಾಜ್ಯ ವಿಧಾನ ಪರಿಷತ್​ನಲ್ಲಿ ಬಜೆಟ್ ಅಧಿವೇಶನ ಗುರುವಾರದ ಕಾರ್ಯಕಲಾಪಗಳು ಅರಂಭವಾಗಿವೆ. ಸದನದಲ್ಲಿ ಎಚ್‌.ಡಿ.ರೇವಣ್ಣ ಕೈಯಲ್ಲಿ ಕೊಬ್ಬರಿ ಬೆಂಬಲ ಬೆಲ ಹೆಚ್ಚಳದ ಬಗ್ಗೆ ಚರ್ಚಿಸಲು ಕೊಬ್ಬರಿಯನ್ನೇ ಹಿಡಿದುಕೊಂಡು ಬಂದಿದ್ದು ಶಾಸಕರ ಹಾಸ್ಯ ಚಟಾಕಿಗಳಿಗೆ ಕಾರಣವಾಯಿತು.

ಸದನ ಪ್ರಾರಂಭವಾಗುತ್ತಿದ್ದಂತೆಯೇ ಎಚ್‌.ಡಿ.ರೇವಣ್ಣ ಕೈಯಲ್ಲಿ ಕೊಬ್ಬರಿಯನ್ನು ಪ್ರದರ್ಶಿಸುತ್ತಾ ಎದ್ದು ನಿಂತು ಇದಕ್ಕೇನಾದರೂ ಮಾಡಿ ಎಂದರು. ಮಾತನಾಡಲು ಎದ್ದು ನಿಂತಿದ್ದ ಸಿಎಂ ಸಿದ್ದರಾಮಯ್ಯ ಏ..ರೇವಣ್ಣ ಯಾವಗಲೂ ನಿಂಬೆಹಣ್ಣು ತರ್ತಾ ಇದ್ದೆ. ಇದೇನು ಕೊಬ್ಬರಿ ಹಿಡ್ಕೊಂಡು ಬಂದಿದ್ಯಾ? ರೇವಣ್ಣ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕೆಲವರು ನಿಂಬೆಹಣ್ಣಿನ ಬದಲಾಗಿ ಕೊಬ್ಬರಿ ತಂದಿದ್ದಾರೆ ಎಂದು ಗುಲ್ಲೆಬ್ಬಿಸಿದರು. ಸಭಾಪತಿ ಯು.ಟಿ.ಖಾದರ್ ಆ ಕೊಬ್ಬರಿಯನ್ನು ಇಲ್ಲಿಗೆ ಕಳಿಸಿ ಹೇಗಿದೆ ಎಂದು ನೋಡುವಾ ಎಂದರು. ಕೊಬ್ಬರಿ ಬೆಲೆ ವಿಚಾರವಾಗಿ ಸದನದಲ್ಲಿ ಸ್ವಾರಸ್ಯಕರ ಚರ್ಚೆಯೇ ಆಗಿದೆ.