ಸಿಎಂಆರ್​ ಶ್ರೀನಾಥ್​  
ನ್ಯೂಸ್

ಕೋಲಾರ ಮರೆತ ಸಿದ್ದರಾಮಯ್ಯ

ಕಿರುವಾರ ಎಸ್.ಸುದರ್ಶನ್

ಕೋಲಾರ: ಜಿಲ್ಲೆಯ ಹಲವು ವರ್ಷಗಳ ಬೇಡಿಕೆಗಳಿಗೆ ಈ ಬಾರಿಯ ರಾಜ್ಯ ಬಜೆಟ್​ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಆಯವ್ಯಯದ ಲೆಕ್ಕಾಚಾರದಲ್ಲಿ ಸಿಎಂಗೆ ಕೋಲಾರ ಲೆಕ್ಕಕ್ಕೇ ಇಲ್ಲದಂತಾಗಿದೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಆರೋಪಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಜಾಗ ವಿಸ್ತರಿಸುವುದು, ಹೆಚ್ಚುವರಿ ಜಾಗ ಕಲ್ಪಿಸಲ ಹಿಂದಿನಿಂದಲೂ ಒತ್ತಾಯ ಮಾಡಿಕೊಂಡು ಬಂದರೂ ಸಹ ಸಮಸ್ಯೆಗೆ ಸ್ಪಂದಿಸಿಲ್ಲ. ಕೆ.ಸಿ ವ್ಯಾಲಿ ಯೋಜನೆಯ 3ನೇ ಹಂತದ ಶುದ್ಧೀಕರಣ ಯೋಜನೆಗೆ ಬಜೆಟ್​ನಲ್ಲಿ ಹಣ ನಿಗದಿ ಮಾಡದೆ, ಮತ್ತಷ್ಟು ಜಿಲ್ಲೆಯನ್ನು ರೋಗಗ್ರಸ್ಥ ಮಾಡುವಂತೆ ಮಾಡುತ್ತಿದೆ ಎಂದು ತಿಳಿಸಿದರು.

ಬಹುರಾಷ್ಟ್ರೀಯ ಕಂಪನಿಗಳ ಹಾಗೂ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಲೆಂದೇ ವೈದ್ಯಕಿಯ ಕಾಲೇಜು ಹಾಗೂ ಕೆಜಿಎಫ್​ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ಹೊರಟ್ಟಿರುವುದು ರೈತರಿಗೆ ಏನು ಅನುಕೂಲವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊರ ವರ್ತುಲ ರಸ್ತೆ(ರಿಂಗ್​ ರೋಡ್​) ಹಾಗೂ ಸಂಸ್ಕರಣಾ ಘಟಕಗಳಿಗೆ ಸಹಭಾಗಿತ್ವದಲ್ಲಿ ಹಣ ಮಾಡಲು ರಾಜ್ಯ ಸರ್ಕಾರಕ್ಕೆ ಖಾಸಗಿ ವ್ಯಕ್ತಿಗಳು ಸಿಕ್ಕಿದಂತಿಲ್ಲ. ಅದಕ್ಕೆ ಅವನ್ನು ಕಡೆಗಣಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾದ ಕಾಂಗ್ರೆಸ್​ ಸರ್ಕಾರ ಜನತೆ ಮೇಲೆ ಬೆಲೆ ಏರಿಸಿ ಹೊರೆ ಹಾಕಲಾಗಿದೆ ಎಂದು ದೂರಿದರು.

ವಿಧಾನಸಭೆ ಚುನಾವಣೆಗೂ ಮುಂಚೆ ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಬಂದಾಗ ಕೋಲಾರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಏರಿದ ಮೇಲೆ ಕೋಲಾರ ಜ್ಞಾಪಕಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.