ನ್ಯೂಸ್

ನಿದ್ರೆಗೆ ಜಾರಿದ ಸಿದ್ದರಾಮಯ್ಯ; ತಟ್ಟಿ ಎಬ್ಬಿಸಿದ ಡಿಕೆಶಿ!

Bengaluru - General - Rama Kishan K V

ಬೆಂಗಳೂರು: ಬಿಜೆಪಿಗೆ ಗುಡ್‌ಬೈ ಹೇಳಿ ಎನ್‌.ವೈ ಗೋಪಾಲಕೃಷ್ಣ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಪಕ್ಕದಲ್ಲಿ ಕುಳಿತಿದ್ದ ಡಿ.ಕೆ.ಶಿವಕುಮಾರ್ ಎಚ್ಚೆತ್ತು ಸಿದ್ದರಾಮಯ್ಯ ಅವರನ್ನು ತಟ್ಟಿ ನಿದ್ದೆಯಿಂದ ಎಬ್ಬಿಸಿದ್ದಾರೆ.

ಸಿದ್ದರಾಮ್ಯಯ ಅವರು ವೇದಿಕೆ ಮೇಲೆಯೇ ನಿದ್ರೆಗೆ ಜಾರುವುದು ಇದೇ ಮೊದಲೇನಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಹಲವು ಕಾರ್ಯಕ್ರಮಗಳಲ್ಲಿ ನಿದ್ರೆ ಮಾಡಿದ್ದರು. ಇದನ್ನೇ ವಿಪಕ್ಷಗಳು ಟೀಕೆಯ ಧಾಳವಾಗಿಸಿಕೊಂಡಿದ್ದವು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಎನ್‌.ವೈ ಗೋಪಾಲಕೃಷ್ಣ ಮಾತನಾಡಿ, ನನ್ನ ಡಿಪಾಸಿಟ್ ಡಿಕೆಶಿಯವರೇ ಕೊಡಲಿ. ಅವರ ಕೈಗುಣ ಚೆನ್ನಾಗಿದೆ. ಈ ಹಿಂದೆಯೂ ಅವರೇ ಡಿಪಾಸಿಟ್ ಕೊಟ್ಟಿದ್ದರು. ನಾನು ಕೂಡ್ಲಿಗಿಯಲ್ಲಿ ಹಾಗೂ ಮೊಳಕಲ್ಮೂರಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂಬ ಭರವಸೆ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ | 5 ರೂ. ಕೇಳಿದ್ದೇ ತಪ್ಪಾಯ್ತು; ಸಿಟ್ಟಿನಲ್ಲಿ ಬಾಲಕನ ಜೀವ ತೆಗೆದ!