ಚನ್ನಪಟ್ಟಣ : ಧ್ವನಿ ಇಲ್ಲದ ಜನತೆಗೆ ದನಿಯಾಗಿದ್ದ ಹಾಗೂ ಶೋಷಣೆಗೆ ಒಳಗಾಗಿದ್ದ ಸವಾಜದ ಅಭಿವೃದ್ಧಿಗಾಗಿ ಮಿಡಿದ ನಾಡೋಜ ಡಾ. ಸಿದ್ಧಲಿಂಗಯ್ಯ ಅವರ ಅಗಲಿಕೆ ಸವಾಜಕ್ಕೆ ತುಂಬಲಾರದ ನಷ್ಟ ಎಂದು ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾರತ ಸಂವಿಧಾನ ಬಳಗದಿಂದ ಗುರುವಾರ ಆಯೋಜಿಸಿದ್ದ ‘ನಾಡೋಜ ಡಾ. ಸಿದ್ಧಲಿಂಗಯ್ಯನವರ ನೆನೆಯೋಣ ಬನ್ನಿ’ ಕಾರ್ಯಕ್ರಮದಲ್ಲಿ ವಾತನಾಡಿ, ಸಿದ್ಧಲಿಂಗಯ್ಯ ಸಂಕುಚಿತ ಮನೋಭಾವಗಳ ವಿರುದ್ಧ ಬರಹಗಳ ಮೂಲಕ ಹೋರಾಟ ನಡೆಸಿದ ಧೀಮಂತರು. ಅವರನ್ನು ನನ್ನ ಅಧಿಕಾರಾವಧಿಯಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿಸಿ ಅವರ ನಿರಂತರ ಹೋರಾಟಕ್ಕೆ ಗೌರವ ಸಲ್ಲಿಸಿದ ತೃಪ್ತಿ ಇದೆ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆದರೆ, ದೇಶ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಸವಾನತೆ ಎಂಬುದು ಮರೀಚಿಕೆಯಾಗಿದ್ದು, ರಾಜ್ಯದಲ್ಲೇ ಕೆಲ ಭಾಗಗಳ ಚಿತ್ರಣವನ್ನು ಗಮನಿಸಿದರೆ ಬಹಳ ಬೇಸರವಾಗುತ್ತದೆ. ಇದರ ಬಗ್ಗೆ ಜನಪ್ರತಿನಿಧಿಗಳಾದ ನಾವು ಅಭಿವೃದ್ಧಿಯ ಆತ್ಮವಿಮರ್ಶೆ ವಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯದ ಆಶಯಗಳು ಈಡೇರಬೇಕಾದರೆ ಎಲ್ಲರಿಗೂ ಸವಾನ ಸವಲತ್ತುಗಳು ದೊರೆಯಬೇಕಿದೆ. ಡಾ. ಸಿದ್ದಲಿಂಗಯ್ಯ ಅವರ ಆದರ್ಶಗಳನ್ನು ಜೀವಂತಗೊಳಿಸುವ ಕೆಲಸವಾಗಬೇಕು ಎಂದರು.
ಸಿದ್ಧಲಿಂಗಯ್ಯ ಅವರ ಆಶಯಗಳನ್ನು ಈಡೇರಿಸಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತ ಸಂವಿಧಾನ ಬಳಗ ಅತ್ಯುತ್ತಮ ಕಾರ್ಯಕ್ರಮ ರೂಪಿಸಿದ್ದು, ಬಳಗ ಮಂಡಿಸಿರುವ ಹಕ್ಕೊತ್ತಾಯಗಳಿಗೆ ಬೆಂಬಲ ನೀಡಲಿದ್ದೇನೆ ಎಂದು ೋಷಿಸಿದರು.
ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಸಿದ್ದಲಿಂಗಯ್ಯ ಅವರ ಪತ್ನಿ ರವಾದೇವಿ. ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು, ಗುಲ್ಬರ್ಗಾ ವಿವಿಯ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ವಾತನಾಡಿದರು. ಯುವ ಮುಖಂಡ ಶಿಶಿರ್ ಪುಟ್ಟಣ್ಣ, ಭಾರತ ಸಂವಿಧಾನ ಬಳಗದ ಜಯಕಾಂತ್ ಚಾಲುಕ್ಯ, ಮತ್ತೀಕೆರೆ ಹನುಮಂತಯ್ಯ, ಎಸ್.ಸಿ. ಶೇಖರ್, ನೀಲಸಂದ್ರ ಸಿದ್ಧರಾಮು, ಚಕ್ಕಲೂರು ಚೌಡಯ್ಯ, ಜಯಸಿಂಹ ಹಾಗೂ ದಲಿತ ಮುಖಂಡರು ಇದ್ದರು.
ಕವಿಯಿಂದ ಪ್ರಭಾವಿತನಾಗಿದ್ದೇನೆ : ವಿಧಾನಪರಿಷತ್ ಸದಸ್ಯ, ವಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾತನಾಡಿ, ‘ಸಿದ್ಧಲಿಂಗಯ್ಯ ಮತ್ತು ನನ್ನ ನಡುವಿನ ಬಾಂಧವ್ಯಕ್ಕೆ ದಶಕಗಳ ಇತಿಹಾಸವಿದೆ. ಅವರ ವಾತುಗಳು ಮತ್ತು ಸಿದ್ಧಾಂತಗಳಿಂದ ನಾನು ಸಾಕಷ್ಟು ಪ್ರಭಾವಿತನಾಗಿದ್ದೆ. ಅವುಗಳನ್ನು ನನ್ನ ರಾಜಕೀಯ ಜೀವನದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಅವರ ಚಿಂತನೆಗಳು ಮತ್ತು ನೆನಪುಗಳನ್ನು ಚಿರಸ್ಥಾಯಿಯಾಗಿಡಲು ಸರ್ಕಾರದೊಂದಿಗೆ ಚರ್ಚೆ ನಡೆಸಿ ಅಗತ್ಯ ನೆರವು ಕಲ್ಪಿಸಲು ಬದ್ಧನಾಗಿದ್ದೇನೆ’ ಎಂದು ತಿಳಿಸಿದರು.
ಚನ್ನಪಟ್ಟಣ: ನನ್ನ ಹಾಗೂ ನಮ್ಮ ಪಕ್ಷದ ಬಗ್ಗೆ ವಾಹಿತಿ ಇಲ್ಲ ಎನ್ನುವುದಾದರೆ ಪ್ರಧಾನಿ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ಗೆ ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ಟಾಂಗ್ ನೀಡಿದರು. ಬಿಜೆಪಿ ದೇಶವನ್ನು ಎರಡನೇ ಬಾರಿಗೆ ಆಳುತ್ತಿರುವ ಪಕ್ಷ. ಜೆಡಿಎಸ್ ಬಗ್ಗೆ ಲುವಾಗಿ ವಾತನಾಡುವುದನ್ನು ಬಿಡಬೇಕು. ನನಗೆ ಬುದ್ದಿ ಹೇಳುವ ಮೊದಲು ಅವರ ನಡವಳಿಕೆ ಏನು ಎಂಬುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷ ಹಾಗೂ ಕುವಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಲಿ ಎಂದು ಕುಟುಕಿದರು.
ತೈಲಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುವಾರಸ್ವಾಮಿ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನಸಾವಾನ್ಯರ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಬಿಜೆಪಿ ಸರ್ಕಾರಗಳು ಬಡವರಿಗೆ ನೀಡುತ್ತಿರುವ ಕೊಡುಗೆ ಬೆಲೆ ಏರಿಕೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ. ಪಕ್ಷದ ಉಸ್ತುವಾರಿಯದ್ದು ಕೇವಲ ಬರೀ ಪಕ್ಷ ಸಂಟನೆ ವಾಡುವುದಲ್ಲ, ರಾಜ್ಯಕ್ಕೆ ಏನು ತೊಂದರೆಯಾಗುತ್ತಿದೆ
ಎಂದು ತಿಳಿಸಿ ಕೇಂದ್ರದಿಂದ ಪರಿಹಾರ ಕೊಡಿಸಬೇಕು ಎಂದು ಅರುಣ್‌ಸಿಂಗ್ ವಿರುದ್ಧ ಕಿಡಿಕಾರಿದರು. ಈ ವೇಳೆ ಸ್ಥಳೀಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಬೆಲೆ ಏರಿಕೆಗೆ ಕಡಿವಾಣ ಹಾಕಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಬದುಕಿನ ಬಗ್ಗೆ ಕಾಳಜಿ ಇಲ್ಲ. ಬೆಲೆ ಏರಿಕೆ ವಾಡುವುದು ತಮ್ಮ ಕರ್ತವ್ಯ ಎಂದುಕೊಂಡಿವೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.
ಬಿಜೆಪಿ ಸರ್ಕಾರ ಪ್ರತಿಯೊಂದು ಹಂತದಲ್ಲೂ ಬೆಲೆ ಏರಿಕೆ ಮಾಡುತ್ತಿದೆ. ಈ ಸರ್ಕಾರಗಳಿಗೆ ಜನಸಾವಾನ್ಯರ ಬದುಕಿನ ಬಗ್ಗೆ ಅರಿವಿಲ್ಲ. ತೆರಿಗೆ ಕಡಿಮೆ ವಾಡಿ ಜನರಿಗೆ ಸಮಸ್ಯೆಯಾಗಿರುವ ಬೆಲೆಏರಿಕೆಗೆ ಕಡಿವಾಣ ಹಾಕಬೇಕು. ಇದು ಸರ್ಕಾರದ ಪ್ರಮುಖ ಕರ್ತವ್ಯವಾಗಬೇಕು ಎಂದು ಆಗ್ರಹಿಸಿದರು.
ಸಿಪಿವೈಗೆ ನಗುತ್ತಲೇ ಟಾಂಗ್ ಕೊಟ್ಟ ಸಂಸದ: ಯೋಗೇಶ್ವರ್ ಸಚಿವರಾಗುತ್ತಾರೆ. ಒಳ್ಳೆಯದಾಗಲಿ ಎಂದು ತಮ್ಮ ಬದ್ಧವೈರಿಗೆ ನಗುತ್ತಲೇ ಸಂಸದರು ಕುಟುಕಿದರು. ವೇದಿಕೆಯಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ ಅವರು, ಯೋಗೇಶ್ವರ್ ಸಚಿವರಾಗುತ್ತಾರೆ ಎಂದು ಹೇಳಿದಾಗ,
ಅವರಿಗೆ ನಾನು ಒಳ್ಳೆಯದಾಗಲಿ ಅಂದೆ ಅಷ್ಟೇ, ಯೋಗೇಶ್ವರ್ ಕಂಡರೆ ಭಯ ಅಲ್ಲ.. ಎಲ್ಲಿ ಏನ್ ಬಿಟ್ಟುಬಿಡುತ್ತಾರೋ ಅಂಥ ಎಂದು ವ್ಯಂಗ್ಯ ಮಿಶ್ರಿತ ನಗುವಿನ ಮೂಲಕ ಟಾಂಗ್ ನೀಡಿದರು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.