ನ್ಯೂಸ್

ಧರ್ಮ, ಸಮಾಜದ ಬೇರು ಸಡಿಲಗೊಳ್ಳುತ್ತಿದೆ: ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಳವಳ

ಮಾಗಡಿ : ವೀರಶೈವ ಲಿಂಗಾಯತರದು ಧಾರ್ಮಿಕವಾದಂತಹ ಶ್ರೀಮಂತ ಸಮಾಜ ಎಂದು ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಡೇವಾರನಹಳ್ಳಿಯಲ್ಲಿ ಭಾನುವಾರ ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯ ಭವನ ಉದ್ಘಾಟನೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ವಾತನಾಡಿದ ಅವರು, ಸವಾಜಕ್ಕೆ ದೊಡ್ಡ ಗೌರವವಿದೆ. ಆದರೆ, ಇತ್ತೀಚೆಗೆ ಧರ್ಮದ ಬೇರು ಸಡಿಲಗೊಳ್ಳುತ್ತಿದ್ದು, ನಮ್ಮ ಪರಂಪರೆಯ ಧರ್ಮದ ತಳಹದಿ ಕುಸಿಯುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲಿಂಗಾಯತರು ಆಚಾರ, ವಿಚಾರ, ನಿಷ್ಠಾವಂತರು, ಪ್ರಾವಾಣಿಕರು, ಸೇವಾಭಾವ ಉಳ್ಳವರು ಎಂದು ಎಲ್ಲ ಸಮಾಜಗಳು ಗೌರವಿಸುತ್ತಿದ್ದ ಕಾಲವಿತ್ತು. ಆದರೆ ಇಂದು ಆ ಗೌರವ ಕಡಿಮೆಯಾಗುತ್ತಿದೆ.

ನಮ್ಮ ಧರ್ಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಜವಾದ ಲಿಂಗವಂತವರಾಗಿ ಬದುಕು ಸಾಗಿಸುವ ಪ್ರಯತ್ನದ ಜತೆಗೆ ಧರ್ಮ ಉಳಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಮೂವತ್ತು ವರ್ಷದ ಹಿಂದೆ ಶಿವಕುವಾರ ಶ್ರೀಗಳು ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಇಂದು ಅವರ ಹೆಸರಿನ ಭವನ ಉದ್ಘಾಟನೆಯಾಗುತ್ತಿರುವುದು ಶ್ಲಾಘನೀಯ ಎಂದರು. ಶಾಸಕ ಎ.ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ಕಾಮಗಾರಿ ನಡೆಯುತ್ತಿದೆ. ಸಿದ್ದಲಿಂಗ ಸ್ವಾಮೀಜಿ ಅವರಿಂದ ಲೋಕಾರ್ಪಣೆಗೊಳಿಸಲಾಗುವುದು, ಈ ಸಮುದಾಯ ಭವನಕ್ಕೆ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ನೀಡುವುದಾಗಿ ಹೇಳಿದರು.

ಶಾಸಕ ಡಾ. ಶ್ರೀನಿವಾಸ ಮೂರ್ತಿ, ವಾಜಿ ಶಾಸಕ ಎಂ.ವಿ. ನಾಗರಾಜು, ಮಹಾಸಭಾ ತಾಲೂಕು ಅಧ್ಯಕ್ಷ ಶಿವರುದ್ರಯ್ಯ, ವೀರಶೈವ ಲಿಂಗಾಯತ ರಾಜ್ಯ ಮುಖಂಡ ಕೆ.ಪಿ.ಮಹದೇವ ಶಾಸ್ತ್ರಿ, ಬಿಎಂಟಿಸಿ ನಿರ್ದೆಶಕ ಕೆ.ಪಿ. ಭೃಂಗೇಶ್, ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಜಗಣ್ಣಯ್ಯನ ಮಠದ ಚನ್ನಬಸವಸ್ವಾಮೀಜಿ,ಮೇಲಣಗವಿ ಮಠದ ಶಾಂತಮುನಿ ದೇಶಿ ಕೇಂದ್ರ ಸ್ವಾಮೀಜಿ,ಹೊನ್ನಮ್ಮ ಗವಿಮಠ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಚುಗಲ್ಲು ಬಂಡೇಮಠ ಬಸವಲಿಂಗ ಸ್ವಾಮೀಜಿ, ಸೋಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಶೈಲಜಾ, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಆಯುಕ್ತ ಎಚ್.ಎಸ್. ಪ್ರಕಾಶ್, ಅರುಣ್ ಸೋಮಣ್ಣ ಸೇರಿ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಅಮೇರಿಕದಲ್ಲಿ ಬಸವ ಸೆಂಟರ್ : ಬೆಂಗಳೂರು ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಬಸವ ಸೆಂಟರ್ ಆಫ್ ನಾರ್ತ್ ಅಮೇರಿಕಾ ಎಂದು ಅಮೇರಿಕಾದಲ್ಲಿ ಆರಂಭವಾಗಿದ್ದು, ಅಲ್ಲಿನ ಅಧ್ಯಕ್ಷರು ಲಿಂಗ ದೀಕ್ಷೆ ಪಡೆಯಲು ಬಂದಿದ್ದಾರೆ. ಡಿ.6ರಂದು ಬೆಂಗಳೂರಿನಲ್ಲಿ ಲಿಂಗದೀಕ್ಷೆ ನಡೆಯುತ್ತಿದೆ. ಬಸವ ಜಯಂತಿ ಕಾರ್ಯಕ್ರಮವನ್ನು 44 ದೇಶಗಳ 15 ಲಕ್ಷ ಮಂದಿ ಆನ್‌ಲೈನ್ ಮೂಲಕ ವೀಕ್ಷಿಸಿದ್ದಾರೆ ಎಂದು ತಿಳಿಸಿದರು.

ಮತಾಂತರಕ್ಕೆ ಬೇಸರ : ಸಮಾಜ ಒಟ್ಟುಗೂಡಿದರೆ ಒಳ್ಳೆಯ ಕೆಲಸ ಮಾಡಬಹುದು. ಇಂದು ಸಮಾಜಕ್ಕೆ ಒಗ್ಗಟ್ಟು ಅಗತ್ಯವಾಗಿದೆ. ಹಳ್ಳಿಗಳಲ್ಲಿ ಇತರ ಧರ್ಮದವರು ಮಠ ಎಂದು ಬೋರ್ಡ್ ಹಾಕಿಕೊಂಡು ಸ್ವಾಮೀಜಿಗಳಂತೆ ಖಾವಿ ತೊಟ್ಟು, ನಮ್ಮ ಆಶ್ರಮದಲ್ಲಿ ದೀಪೋತ್ಸವಕ್ಕೆ ಬನ್ನಿ ಎಂದು ಕರೆದು ಮುಗ್ಧರನ್ನು ಯಾಮಾರಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಸಂಸ್ಕಾರದಿಂದ ಸಮಾಜ ಗಟ್ಟಿ : ಪೂರ್ವಿಕರು ತಮ್ಮ ಮಕ್ಕಳಿಗೆ ಜಗಕ್ಕೆಲ್ಲ ಜ್ಯೋತಿಯಾಗು, ಸಮಾಜಕ್ಕೆ ಆಸ್ತಿಯಾಗು, ಬೆಳಕಾಗು ಎನ್ನುತ್ತಿದ್ದರು. ಈಗ ಇಂಜಿನಿಯರ್, ಡಾಕ್ಟರ್, ವಕೀಲ, ವಿಜ್ಞಾನಿಯಾಗು ಎನ್ನುತ್ತಾರೆ. ತಾಯಂದಿರು ಕೊಡುವ ಸಂಸ್ಕಾರದಿಂದ ಸಮಾಜ ಗಟ್ಟಿಯಾಗಿ, ಆಚಾರ ವಿಚಾರವಂತ ಸವಾಜ ನಿರ್ಮಾಣ ಸಾಧ್ಯ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.