ಪಟನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚಿಸಿ ಕೆಲವೇ ತಿಂಗಳುಗಳಾಗಿದೆ. ಅದಾಗಲೇ ಸರ್ಕಾರ ಬೀಳಿಸುವ ಯೋಚನೆಯನ್ನು ವಿರೋಧ ಪಕ್ಷದವರು ಮಾಡಲಾರಂಭಿಸಿದ್ದಾರೆ. ಜೆಡಿಯುನ 17 ಶಾಸಕರು ಆರ್ಜೆಡಿಗತೆ ಬರಲು ಸಿದ್ಧರಿದ್ದಾರೆ ಎಂದು ಆರ್ಜೆಡಿ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಅಮ್ಮನನ್ನು ಕೊಂದು, ಅಂಗಳದಲ್ಲಿ ಬೆಂಕಿ ಹಚ್ಚಿ ಮಂತ್ರ ಪಠಿಸಿದ ಮಗ! ಕೊಲೆಗೆ ಕಾರಣ ಕೇಳಿ ಶಾಕ್ ಆದ ಸಹೋದರಿ
ಜೆಡಿಯುನ 17 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಆದರೆ ಅದನ್ನು ತಡೆಯಲೆಂದೇ ಸರ್ಕಾರ ಪಕ್ಷಾಂತದ ನಿಷೇಧ ಕಾನೂನು ಮಾಡಿದೆ. ನಾವು ಕಾನೂನಿಗೆ ಗೌರವಿಸುತ್ತೇವೆ. ಅದಕ್ಕೆಂದೇ ಶಾಸಕರಿಗೆ ಮೊದಲೇ ಹೇಳಿಟ್ಟಿದ್ದೇವೆ. 28 ಜನರು ಒಟ್ಟಾಗಿ ಬಂದಾಗ ನಮ್ಮ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದೇವೆ. ಶೀಘ್ರವೇ ಆ ಸಂಖ್ಯೆ 28 ಆಗಲಿದೆ ಆರ್ಜೆಡಿ ನಾಯಕ ಶ್ಯಾಮ್ ರಾಜಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಗೆದ್ದು ಬೀಗಿದ ಗಂಡ ಹೆಂಡತಿ!
ಪ್ರಜಾಪ್ರಭುತ್ವದಲ್ಲಿ ನಿತೀಶ್ ಕುಮಾರ್ ಬಿಜೆಪಿಯ ಅಡಿಯಾಳಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಿಂದಾಗಿ ಬೇಸರಗೊಂಡಿರುವ ಶಾಸಕರು ನಮ್ಮ ಪಕ್ಷಕ್ಕೆ ಬರಲು ಹಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಶ್ಯಾಮ್ ರಾಜಕ್ ಅವರ ಈ ಹೇಳಿಕೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ತಳ್ಳಿ ಹಾಕಿದ್ದಾರೆ. ಇದೆಲ್ಲ ಸುಳ್ಳು ಹೇಳಿಕೆಗಳು, ಆ ರೀತಿ ಯಾರೂ ನಮ್ಮ ಪಕ್ಷದಿಂದ ಅವರ ಪಕ್ಷಕ್ಕೆ ಹೋಗಲು ಸಿದ್ಧರಾಗಿಲ್ಲ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)