Subanshu Shukla: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ತಂಡ ಇಂದು(ಜೂ.26) ಸಂಜೆ 4.30 ಗಂಟೆಗೆ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣ(ISS) ತಲುಪಿತು. ಈ ದಿನ ದೇಶದ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಕ್ಷಣವಾಗಿದೆ.
ಇದನ್ನು ಓದಿ:ಪದೇ ಪದೇ ನಿಮ್ಮ ಸ್ಮಾರ್ಟ್ಫೋನ್ ಸ್ಟೋರೇಜ್ ಫುಲ್ ಆಗ್ತಿದ್ಯಾ? ಹಾಗಿದ್ರೆ ಈ ಟ್ರಿಕ್ ಟ್ರೈ ಮಾಡಿ| Mobile storage
ಹೌದು, 41 ವರ್ಷಗಳ ಬಳಿ ಭಾರತೀಯನೊಬ್ಬ ಬಾಹ್ಯಕಾಶ ನಿಲ್ದಾಣದಲ್ಲಿ ಕಾಲಿಟ್ಟಿದ್ದಾನೆ. ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಇದರರ್ಥ 41 ವರ್ಷಗಳ ನಂತರ ಒಬ್ಬ ಭಾರತೀಯ ಮತ್ತೆ ಬಾಹ್ಯಾಕಾಶಕ್ಕೆ ಕಾಲಿಟ್ಟಿದ್ದಾನೆ. ಹೀಗಾಗಿ, ಈ ದಿನ ಇತಿಹಾಸ ಪುಟಗಳಲ್ಲಿ ಹಚ್ಚೊತ್ತಿದೆ.
ಜೂ.25 ರಂದು, ಮಧ್ಯಾಹ್ನ 12 ಗಂಟೆ ಸುಮಾರಿಗೆ, ಆಕ್ಸಿಯಮ್ ಮಿಷನ್ -4 ರ ಅಡಿಯಲ್ಲಿ ಗಗನಕ್ಕೆ ಚಿಮ್ಮಿದ ಡ್ರ್ಯಾಗನ್ ನೌಕೆ 28 ಗಂಟೆಗಳ ಪ್ರಯಾಣದ ನಂತರ, ಎಲ್ಲಾ ಸುರಕ್ಷಿತವಾಗಿ ಗಗನಯಾತ್ರಿಗಳು ISS ತಲುಪಿದ್ದಾರೆ.
ಇದನ್ನು ಓದಿ:ಪದೇ ಪದೇ ನಿಮ್ಮ ಸ್ಮಾರ್ಟ್ಫೋನ್ ಸ್ಟೋರೇಜ್ ಫುಲ್ ಆಗ್ತಿದ್ಯಾ? ಹಾಗಿದ್ರೆ ಈ ಟ್ರಿಕ್ ಟ್ರೈ ಮಾಡಿ| Mobile storage
ಜೂನ್ 26 ರಂದು ಸಂಜೆ 4 ಗಂಟೆಗೆ ISS ನೊಂದಿಗೆ ಯಶಸ್ವಿಯಾಗಿ ಡಾಕ್ ಮಾಡಿತು. ಇದರರ್ಥ ಬಾಹ್ಯಾಕಾಶ ನೌಕೆ ಈಗ ISS ಗೆ ಸಂಪರ್ಕ ಹೊಂದಿದೆ ಮತ್ತು ಸಿಬ್ಬಂದಿ ಸದಸ್ಯರು ಈಗ ನಿಲ್ದಾಣವನ್ನು ಪ್ರವೇಶಿಸಿದ್ದಾರೆ(ಏಜೆನ್ಸೀಸ್)