ನ್ಯೂಸ್

ಶ್ರೀಕಾಂತ್​ ಶಿಂಧೆ Maharashtra ಉಪ ಮುಖ್ಯಮಂತ್ರಿ.. ತಂದೆ ಏಕನಾಥ್​ ಶಿಂಧೆ ಹೇಳಿದ್ದೇನು?

ಮುಂಬೈ: ಮಹಾರಾಷ್ಟ್ರದಲ್ಲಿ ಇದೀಗ ಮುಖ್ಯಮಂತ್ರಿ ಸ್ಥಾನದ ಜಟಾಪಟಿ ನಡುವೆ ಮುಂದಿನ ಸಿಎಂ ಬಿಜೆಪಿಯ ದೇವೇಂದ್ರ ಫಡ್ನವಿಸ್ ಎಂದು ಬಹುತೇಕ ಖಚಿತವಾಗಿದೆ. ಅಲ್ಲದೆ, ಡಿ.5ರಂದು ಪ್ರಮಾಣ ವಚನ ಕೂಡ ನಡೆಯಲಿದೆ ಎಂದು ವರದಿಯಾಗಿದೆ.

ಇದೆಲ್ಲದರ ನಡುವೆ ಹಂಗಾಮಿ ಸಿಎಂ ಏಕನಾಥ್​ ಶಿಂಧೆಯ ಮುಂದಿನ ನಡೆ ಏನು ಎಂಬುವುದು ನಿಗೂಢವಾಗಿದೆ. ತಮ್ಮ ಶಿವಸೇನಾ ನಾಯಕರು ನಮ್ಮ ಶಿಂಧೆ ಅವರು ಸಿಎಂ ಆಗಿ ಇದ್ದವರು. ಈಗ ಅದೇ ಹಾದಿಯಲ್ಲಿ ಮುಂದುವರೆಯವಂತೆ ಸಿಎಂ ಸ್ಥಾನವನ್ನೇ ನೀಡಿ. ಡಿಸಿಎಂ ಸ್ಥಾನ ಅವರಿಗೆ ಸೂಕ್ತ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಹೀಗಾಗಿ, ತಮ್ಮ ಮಗ ಶ್ರೀಕಾಂತ್​ ಶಿಂಧೆ ಡಿಸಿಎಂ(Maharashtra) ಆಗಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡತೊಡಗಿದೆ. ತಮ್ಮ ಮಗ ಡಿಸಿಎಂ ಆಗಲ್ಲ ಎಂದು ಏಕನಾಥ್​ ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಭಾನುವಾರ(ಡಿ.01)ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಂಧೆ, ಶ್ರೀಕಾಂತ್​ ಡಿಸಿಎಂ ಅಕಾಂಕ್ಷಿ ಎನ್ನುವುದು ಊಹಪೋಹ. ಇದು ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ ಅಷ್ಟೇ ಎಂದು ತಳ್ಳಿ ಹಾಕಿದರು.

ಸಿಎಂ ಮತ್ತು ಡಿಸಿಎಂ ಸ್ಥಾನದ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಯಾವುದೇ ನಿರ್ಧಾರಗಳು ಅಂತಿಮವಾಗಿಲ್ಲ. ಈ ರೀತಿಯ ಚರ್ಚೆಗಳನ್ನು ನೀವು (ಮಾಧ್ಯಮ) ಚರ್ಚೆ ಮಾಡುತ್ತಿದ್ದಿರಿ. ನಾನು, ಪಢ್ನವಿಸ್​ ಮತ್ತು ಅಜಿತ್​ ಪವಾರ್​ ಜತೆ ಮತ್ತೊಂದು ಸುತ್ತಿನ ಮಾತುಕತೆ ಮುಂಬೈನಲ್ಲಿ ನಡೆಯಲಿದೆ. ಬಳಿಕ ಅಂತಿಮ ತೀರ್ಮಾನ ಮತ್ತು ನಿರ್ಧಾರ ಮಾಡುತ್ತೇವೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಇಷ್ಟೋಂದು ದೊಡ್ಡಮಟ್ಟದಲ್ಲಿ ನಮ್ಮನ್ನು ಮರು ಆಯ್ಕೆ ಮಾಡಿದ್ದಾರೆ. ಹೀಗಾಗಿ, ಕೂಡಲೇ ನಿರ್ಧಾರ ಮಾಡಿ ಅಂತಿಮಗೊಳಿಸಲಾಗುವುದು ಎಂದು ಶಿಂಧೆ ಸ್ಪಷ್ಟಪಡಿಸಿದರು.

''ನಮ್ಮ ವೈಯಕ್ತಿಕ ವರ್ಚಸ್ಸಿಗೊಸ್ಕರ ಬಡೆದಾಡಿಕೊಳ್ಳುವುದಿಲ್ಲ. ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಯಾರು ಯಾವ ಹುದ್ದೆ ಪಡೆಯುತ್ತಾರೆ ಎಂಬುವುದು ಮುಖ್ಯವಲ್ಲ. ಜನರ ಸಮಸ್ಯೆ ಮತ್ತು ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಮುಖ್ಯ ಎಂದ ಅವರು, ಸಿಎಂ ಸ್ಥಾನದ ನಿರ್ಧಾರವನ್ನು ಪಿಎಂ ಮೋದಿ ಮತ್ತು ಅಮಿತ್​ ಶಾ ತಗೆದುಕೊಳ್ಳಲಿದ್ದಾರೆ ಎಂದು ಪುನರುಚ್ಚಿಸಿದರು.(ಏಜೆನ್ಸೀಸ್​).