ಆನಂದಪುರದಲ್ಲಿ ಜರುಗಿದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವರ ರಥೋತ್ಸವ. 
ನ್ಯೂಸ್

ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ

ಆನಂದಪುರ: ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ನೆರವೇರಿತು. ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಸಹಿತ ಪೂಜೆ, ಪ್ರಾಕಾರ ಬಲಿ, ಮಹಾಪೂಜೆ ನಡೆಯಿತು.

ಇದಕ್ಕೂ ಮೊದಲು ದೇವಾಲಯದ ಬೀದಿಯಲ್ಲಿ ಗಜವಾಹನೋತ್ಸವ, ಯಾತ್ರಾದಾನ ಪೂರ್ವಕ ಸುಮೂಹೂರ್ತದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಮಹಾರಥದಲ್ಲಿ ಸ್ಥಾಪನೆ, ಪೂಜೆ, ಪ್ರಸಾದ ವಿತರಣೆ ನಂತರ ತೇರನ್ನು ಎಳೆಯಲಾಯಿತು. ಸುತ್ತಮುತ್ತಲ ಗ್ರಾಮಗಳ ಭಕ್ತರು ರಥ ಎಳೆದು ಸಂಭ್ರಮಿಸಿದರು.

ಭಜನೆ, ಕೋಲಾಟದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುತ್ಯಮ್ಮ ದೇವಾಲಯ ವೃತ್ತದವರೆಗೆ ಸಾಗಿತು. ನಂತರ ಬಸ್ ನಿಲ್ದಾಣದ ಮೂಲಕ ಮಾರಿಕಾಂಬಾ ದೇವಾಲಯದ ಎದುರಿನ ರಸ್ತೆ ಮೂಲಕ ಪುನಃ ದೇವಾಲಯಕ್ಕೆ ಮಹಾರಥವನ್ನು ತರಲಾಯಿತು. ಮುಜರಾಯಿ ಇಲಾಖೆ ಪ್ರತಿನಿಧಿಗಳು, ಜಾತ್ರಾ ಸಮಿತಿ ಪದಾಧಿಕಾರಿಗಳು, ಅರ್ಚಕರ ತಂಡ ಮತ್ತು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.