ಹೊಳೆಹೊನ್ನೂರು ಸಮೀಪದ ಕೂಡ್ಲಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆದ ಚಂಡಿಕಾ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು.  
ನ್ಯೂಸ್

ಕೂಡ್ಲಿಯಲ್ಲಿ ಶ್ರೀ ಚಂಡಿಕಾ ಹೋಮ

ಹೊಳೆಹೊನ್ನೂರು: ಸಮೀಪದ ಶ್ರೀ ಕೂಡ್ಲಿ ದುರ್ಗಾಪರಮೇಶ್ವರಿ ಅಮ್ಮನ ಪೂಜೆ ಹಾಗೂ ಶ್ರೀ ಚಂಡಿಕಾ ಹೋಮ ಕಾರ್ಯಕ್ರಮ ನೆರವೇರಿತು. ದೇವಿಗೆ ಪುಣ್ಯ ತೀರ್ಥ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾಬಲಿ, ಮಹಾನೈವೇದ್ಯ, ರಾಶಿಬಲಿ ಮತ್ತು ಸುವಾಸಿನಿ, ಮಂಗಳಾರತಿ ಪೂಜೆ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಪುಣ್ಯಾಹವಾಚನ, ಗಣಪತಿ ಪೂಜೆ, ಸಂಕಲ್ಪ, ಪಾರಾಯಣ, ಸಹಸ್ರಾರ್ಚನೆ, ಪೂರ್ಣಾಹುತಿ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶೃಂಗೇರಿ ಪೀಠದ ಕೂಡಲಿ ಶಾಖೆ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅವರು ಕೂಡಲಿ ಕ್ಷೇತ್ರದ ಮಹಾಶಕ್ತಿ ಶ್ರೀ ದುರ್ಗಮ್ಮನವರ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅರುಣಾಚಲ ಅಯ್ಯರ್ ಅವರು ಹೋಮ ಹಾಗೂ ಪೂಜಾ ಕಾರ್ಯಕ್ರಮ ನಡೆಸಿದರು. ಅರ್ಚಕ ಡಿ.ಚಂದ್ರಶೇಖರ್, ಸೇವಾಕರ್ತರಾದ ಕುಸುಮಾ ಚಂದ್ರಶೇಖರ್, ಶಾಂತಮ್ಮ, ಪ್ರಸನ್ನ, ಲಕ್ಷ್ಮೀದೇವಿ ಬಲರಾಮಪ್ಪ, ಮಂಜಮ್ಮ, ಈಶ್ವರಪ್ಪ ಇತರರಿದ್ದರು.