ನ್ಯೂಸ್

ವದಂತಿ ಗೆಳೆಯನೊಂದಿಗೆ ಮದುವೆ ಆರತಕ್ಷತೆಗೆ ಹಾಜರಾದ ಬಿಟೌನ್​ ನಟಿ; ರಾಹುಲ್ ಮೋದಿ ಜತೆ ಶ್ರದ್ಧಾ ಪೋಸ್​​ | Shraddha Kapoor

ಮುಂಬೈ: ಬಾಲಿವುಡ್​ ನಟಿ ಶ್ರದ್ಧಾ ಕಪೂರ್(Shraddha Kapoor) ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಕೆಲವೊಂದು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಫ್ಯಾನ್ಸ್​ ಕೂಡ ನಟಿಯ ಪೋಸ್ಟ್‌ಗಳಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿಯ ವಿಡಿಯೋವೊಂದು ಹರಿದಾಡುತ್ತಿದೆ.ಆ ವಿಡಿಯೋದಲ್ಲಿ ಮದುವೆಯ ಆರತಕ್ಷತೆಯಲ್ಲಿ ರಾಹುಲ್ ಮೋದಿ ಜತೆ ಶ್ರದ್ಧಾ ಪೋಸ್ ಕೊಡುತ್ತಿರುವುದನ್ನು ನೋಡಬಹುದು.

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಮದುವೆಯ ಆರತಕ್ಷತೆಯಲ್ಲಿ ನಟಿ ಶ್ರದ್ಧಾ ಕಪೂರ್​ ಭಾಗಿಯಾಗಿದ್ದರು. ವಿಶೇಷವೆಂದರೆ ವದಂತಿ ಗೆಳೆಯ ರಾಹುಲ್ ಮೋದಿ ಜತೆ ಶ್ರದ್ಧಾ ಪೋಸ್ ನೀಡಿದ್ದಾರೆ. ಈ ವಿಡಿಯೋ ಅವರ ಪ್ರಣಯದ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ವಾಸ್ತವವಾಗಿ ಫೆಬ್ರವರಿ 22, 2025ರಂದು ಅಭಿಮಾನಿಗಳ ಪುಟಗಳಲ್ಲಿ ಈ ವಿಡಿಯೋ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ಶ್ರದ್ಧಾ ಕಪೂರ್ ಗೋಲ್ಡನ್​​ ಕಲರ್​​ ಉಡುಪು ಧರಿಸಿದ್ದಾರೆ. ವಿವಾಹದ ಆರತಕ್ಷತೆಯ ವೇದಿಕೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ನಟಿ ವಧು-ವರರು ಹಾಗೂ ಅವರ ಕುಟುಂಬಸ್ಥರನ್ನು ಮಾತನಾಡಿಸುತ್ತಾರೆ. ಫೋಟೋಗೆ ಫೋಸ್​​ ನೀಡುವ ಸಮಯದಲ್ಲಿ ಶ್ರದ್ಧಾ ಅವರ ಗೆಳೆಯ ರಾಹುಲ್ ಮೋದಿ ಕೂಡ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಳ್ಳುವುದನ್ನು ನೋಡಬಹುದು.

ಏತನ್ಮಧ್ಯೆ ಶ್ರದ್ಧಾ ಕಪೂರ್ ಕೂಡ ಸಮಾರಂಭದಲ್ಲಿನ ಕೆಲವು ಫೋಟೋಗಳನ್ನು ತನ್ನ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರು ಶೇರ್​ ಮಾಡಿರುವ ಫೋಟೋಗಳಲ್ಲಿ ರಾಹುಲ್ ಮೋದಿ ಇರಲಿಲ್ಲ. ಮೊದಲ ಚಿತ್ರದಲ್ಲಿ ಶ್ರದ್ಧಾ ಪಾನಿ ಪುರಿ ತಿನ್ನುತ್ತಿರುವುದು ಕಂಡುಬಂದರೆ, ಎರಡನೇ ಮತ್ತು ಮೂರನೇ ಚಿತ್ರದಲ್ಲಿ ಅವರು ತನ್ನ ಲುಕ್ ಅನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಕೊನೆಯ ಸ್ಲೈಡ್‌ನಲ್ಲಿ ಶ್ರದ್ಧಾ ಕುಲ್ಹಾದ್ ಚಹಾವನ್ನು ಸವಿಯುತ್ತಾ ಕ್ಯಾಮೆರಾಗೆ ತಮಾಷೆಯ ಪ್ರತಿಕ್ರಿಯೆ ನೀಡುತ್ತಿರುವುದು ಕಂಡುಬರುತ್ತದೆ.

ಶ್ರದ್ಧಾ ಕಪೂರ್​​​ 'ಸ್ತ್ರೀ 2' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಸಿನಿಮಾಗಳ ಕುರಿತ ಅಧಿಕೃತ ಪ್ರಕಟಣೆಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.(ಏಜೆನ್ಸೀಸ್​​)