ನ್ಯೂಸ್

ರಾಹುಲ್ ಮೋದಿ ಜತೆ ಶ್ರದ್ಧಾ ಕಪೂರ್; ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಟಾರ್‌ ಜೋಡಿ…

ಬೆಂಗಳೂರು: ಬಾಲಿವುಡ್‌ ನಟಿ ಶ್ರದ್ಧಾ ಕಪೂರ್  ಬಾಯ್ ಫ್ರೆಂಡ್ ರಾಹುಲ್ ಮೋದಿ ಜತೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕುರಿತಾದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಜೋಡಿ ಮೊದಲ ಬಾರಿಗೆ ಅಧಿಕೃತವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಗುಜರಾತ್‌ಗೆ ತೆರಳುವ ಮೊದಲು ಮುಂಬೈನ ಖಾಸಗಿ ಟರ್ಮಿನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಮತ್ತು ರಾಹುಲ್ ಬಿಳಿ ಮತ್ತು ನೀಲಿ ಬಣ್ಣದ ಡೆನಿಮ್‌ನಲ್ಲಿ ಒಂದೇ ತರದ ಬಟ್ಟೆಗಳನ್ನು ಆರಿಸಿಕೊಂಡಿದ್ದರು.

ವಿಮಾನ ನಿಲ್ದಾಣದಲ್ಲಿ ಅವರು  ಜೊತೆಯಾಗಿ ಕಾಣಿಸಿಕೊಂಡ ನಂತರ ಪಾಪರಾಜಿ ವೀಡಿಯೊಗಳಲ್ಲಿ, ಶ್ರದ್ಧಾ ಮತ್ತು ರಾಹುಲ್ ಈವೆಂಟ್ ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಗುರುತಿಸಲಾಗಿದೆ.

ಶ್ರದ್ಧಾ ರಾಹುಲ್ ಅವರೊಂದಿಗಿನ ತನ್ನ ಸಂಬಂಧವನ್ನ  ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲವಾದರೂ,  ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕವಾಗಿ ಸಂಬಂಧದ ರೂಮರ್‌ಗಳು ನಿಜ ಎಂದು ನಂಬಲು ಕಾರಣವಾಗಿದೆ.